ಕನ್ನಡದಲ್ಲೇ ಇಂಗ್ಲಿಷ್​ ಕಲಿಕೆ: ದೈನಂದಿನ ಬಳಕೆಯ ವಾಕ್ಯಗಳು

English vvani
Published on

ಬಂದೂಕನ್ನು ಸ್ವಲ್ಪ ಎತ್ತಿ ಅದರ ನೆಚ್ಚು ಮತ್ತು ಗುರಿ ಒಂದೇ ನೇರಕ್ಕೆ ಬಂದೊಡನೆ ಗುಂಡಿಕ್ಕಿ.- Raise the gun a bit up, align the notch on the gun with the target and fire.

ಸ್ವಾಮೀಜಿಯ ಬಗೆಗಿನ ಅವರ ಟೀಕೆ ಅವರ ತೀವ್ರ ಬೆಂಬಲಿಗರೂ ಅವರಿಂದ ದೂರವಾಗುವಂತೆ ಮಾಡಿತು.- His comments on the abbot have alienated even his fervent supporters.

ಎಲ್ಲಾ ಮಕ್ಕಳು ಒಂದೇ ತರಹ ಕಾಣುವುದರಿಂದ ಯಾರು ಯಾರೆಂದು ಗುರುತು ಹಿಡಿಯುವುದು ಕಷ್ಟಕರ.- All the children look alike and it’s difficult to recognize who is who.

ಅವಳಿಗೆ ಕುಟುಂಬದವನೆಂದು ಹೇಳಿಕೊಳ್ಳಲು ಇರುವುದು ನಾನು ಮಾತ್ರ ಆದುದರಿಂದ ಅವಳು ಈ ಕ್ರೂರ ಜಗತ್ತಿನಲ್ಲಿ ಎಲ್ಲೆಲ್ಲೋ ಗೊತ್ತುಗುರಿ ಇಲ್ಲದೆ ಅಲೆಯುವಂತಾಗಲು ನಾನು ಬಿಡಲಾರೆ.- I am all the family she has and so I can’t let her go adrift in this unkind world.

ಹೇಗಿದ್ದೀ ಎಂದೊಡನೆ ಆಕೆ ಬಿಕ್ಕಿ ಬಿಕ್ಕಿ ಅತ್ತುಬಿಟ್ಟ ಅವಳನ್ನು ಸಮಾಧಾನಿಸಲು ಬಹಳ ಸಮಯ ತಗುಲಿತು.- She burst into tears when I asked her how she was and it took long for me to allay her.

ಎಲ್ಲ ಸೇರಿ ರೂ. 2300 ಆಗುತ್ತದೆ ಸರ್.- Altogether it will be Rs. 2300 sir.

ಪ್ರತಿ ವರ್ಷ ಸ್ವಾತಂತ್ರ್ಯೊತ್ಸವದ ದಿನ ರಾಷ್ಟ್ರಗೀತೆ ಹಾಡುತ್ತಾ ನಮ್ಮ ಮಾತೃಭೂಮಿಗೆ ನಮ್ಮ ವಿಧೇಯತೆ ಮತ್ತು ಶರಣಾಗತಿ ವ್ಯಕ್ತಪಡಿಸುವಾಗ ನನ್ನ ಕಣ್ಣಾಲಿಗಳು ತುಂಬಿ ಬರುತ್ತದೆ. -Every year, on Independence day my eyes well up when the national anthem is sung pledging allegiance to the mother land.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net