ಒಂದೇ ಒಂದು ಫೋಟೋ ಶೇರ್ ಮಾಡಿದ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಗೆ 11 ಲಕ್ಷ ರೂ. ದಂಡ!

Heather Knight
Published on

ನವದೆಹಲಿ: 2012 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕಪ್ಪು ಮುಖದ ಫೋಟೋವನ್ನು ಹಂಚಿಕೊಂಡಿದ್ದಕ್ಕಾಗಿ ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ಹೀದರ್ ನೈಟ್ (Heather Knight) ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು 1000 ಪೌಂಡ್ (ಸುಮಾರು 11 ಲಕ್ಷ ರೂ.) ದಂಡ ವಿಧಿಸಿದೆ.

ನಡೆದಿದ್ದೇನು?: 2012 ರಲ್ಲಿ ಕೆಂಟ್‌ನ ಕ್ರಿಕೆಟ್ ಕ್ಲಬ್‌ನಲ್ಲಿ ಫ್ಯಾನ್ಸಿ ಡ್ರೆಸ್ ಪಾರ್ಟಿಯಲ್ಲಿ ಭಾಗವಹಿಸಿದ್ದಾಗ ಹೀದರ್ ನೈಟ್ ಕಪ್ಪು ಮುಖದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವರ್ಣಭೇದ ನೀತಿ ಅಥವಾ ತಾರತಮ್ಯವನ್ನು ಉತ್ತೇಜಿಸುವ ಫೋಟೋದೊಂದಿಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇದೀಗ ದಂಡ ವಿಧಿಸಿದೆ.

ಹೀದರ್  ಫೋಟೋ ಹಂಚಿಕೊಂಡಿರುವುದು ಆಕ್ಷೇಪಾರ್ಹ ಎಂದು ಕಂಡುಹಿಡಿದಿದೆ. ECB ನಿರ್ದೇಶನ 3.3 ಅನ್ನು ಸಹ ಉಲ್ಲಂಘಿಸಿದೆ. ಈ ಕಾಯಿದೆಯು ಕ್ರಿಕೆಟ್‌ನ ಹಿತಾಸಕ್ತಿಗಳಿಗೆ ಪೂರ್ವಾಗ್ರಹ ಅಥವಾ ಕ್ರಿಕೆಟ್/ಕ್ರಿಕೆಟಿಗರನ್ನು ಅಪಖ್ಯಾತಿಗೆ ತರುವ ಕಾರ್ಯಗಳು ಅಥವಾ ಲೋಪಗಳನ್ನು ಪರಿಗಣಿಸುತ್ತದೆ. ಹೀದರ್ ನೈಟ್ £ 1000 ದಂಡ  ವಿಧಿಸಲಾಗಿದೆ.

2012 ರಲ್ಲಿ ನನ್ನ ತಪ್ಪಿಗೆ ನಾನು ವಿಷಾದಿಸುತ್ತೇನೆ. ನಾನು ತಪ್ಪು ಮಾಡಿದ್ದು ನಿಜ. ಆದರೆ, ಆಗ ನನಗೆ ತಪ್ಪಿನ ಬಗ್ಗೆ ತಿಳಿದಿರಲಿಲ್ಲ. ಅಲ್ಲದೆ ದುರುದ್ದೇಶವೂ ಇಲ್ಲ. ಈಗ ನನ್ನ ತಪ್ಪನ್ನು ಬದಲಾಯಿಸಲು ಸಾಧ್ಯವಾಗದಿದ್ದರೂ, ಅಂತಹ ಘಟನೆಗಳ ವಿರುದ್ಧ ಧ್ವನಿ ಎತ್ತಲು ನಾನು ಬದ್ಧನಾಗಿದ್ದೇನೆ, ”ಎಂದು ಹೀದರ್ ನೈಟ್ ಹೇಳಿದರು.

2016ರಲ್ಲಿ ಇಂಗ್ಲೆಂಡ್ ತಂಡದ ನಾಯಕಿಯಾಗಿದ್ದ ಹೀದರ್ ನೈಟ್ ಸದ್ಯ ಮಹಿಳಾ ಟಿ20 ವಿಶ್ವಕಪ್‌ಗೆ ತಯಾರಿ ನಡೆಸುತ್ತಿದ್ದಾರೆ. ಇದರ ಪ್ರಕಾರ ಅಕ್ಟೋಬರ್ 3ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡವನ್ನು ಹೀದರ್ ನೈಟ್ ಮುನ್ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net