ಜಗಳಕ್ಕಿಳಿದ ಪದವೀಧರನನ್ನು ಕಳ್ಳ ಎಂದುಕೊಂಡು ದೂರು ದಾಖಲಿಸಿದ್ರು; ಇಬ್ಬರ ಬಂಧನ…

Collides With Truck
Published on

ಬೆಂಗಳೂರು: ಇಲ್ಲೊಬ್ಬ ಎಂಜಿನಿಯರಿಂಗ್ ಪದವೀಧರ ತನ್ನ ಸ್ನೇಹಿತನೊಂದಿಗೆ ಬೈಕ್ ಸವಾರಿ ಮಾಡುತ್ತಿದ್ದ. ಈ ಸಂದರ್ಭ ದಾರಿಯಲ್ಲಿ ಹೋಗುತ್ತಿದ್ದ ಕಾರಿನೊಂದಿಗೆ ಈತನ ಬೈಕ್ ಸ್ವಲ್ಪ ಟಚ್ ಆಗಿದೆ. ಇಷ್ಟಕ್ಕೇ ಜಗಳಕ್ಕಿಳಿಯಲು ಹೋದ ಬೈಕ್ ಸವಾರರನ್ನು ಕಳ್ಳ ರು ಎಂದು ಭಾವಿಸಿದ ಕಾರಿನವರು ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಆದದ್ದು ಮಾತ್ರ ವಿಚಿತ್ರ ಪ್ರಸಂಗ…

ಕಾರಿನವರ ಜೊತೆ ಜಗಳಕ್ಕೆ ಇಳಿದ ಎಂಜಿನಿಯರ್ ಪದವೀಧರನನ್ನು ಕಾರಿನಲ್ಲಿದ್ದವರ ದೂರಿನ ಆಧಾರದ ಮೇಲೆ  ಮೈಕೋ ಲೇಔಟ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಅಸಲಿಗೆ ಆಗಿದ್ದೇನು?

ನಿನ್ನೆ ರಾತ್ರಿ ಮೈಕೋ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ ಕುಟುಂಬವೊಂದು ಪ್ರಯಾಣ ಮಾಡುತ್ತಿತ್ತು. ಈ ವೇಳೆ ಗೆಳೆಯನ ಜತೆ ಎಂಜಿನಿಯರ್ ಪದವೀಧರ ಹೋಗುತ್ತಿದ್ದ. ರಸ್ತೆಯಲ್ಲಿ ಹೋಗೋವಾಗ ಕಾರು-ಬೈಕ್ ಮಧ್ಯೆ ಸಣ್ಣದಾಗಿ ಟಚ್ ಆಗಿದೆ. ಇದರಿಂದ ಸಿಟ್ಟಿಗೆದ್ದ ಬೈಕ್ ಸವಾರ ಕಾರಿಗೆ ಬೈಕ್ ಅಡ್ಡ ಹಾಕಿದ್ದ. ಈತನೊಂದಿಗೆ ಆತನ ಗೆಳೆಯನೂ ಇದ್ದ. ಈ ಸಂದರ್ಭ ಅವರಿಬ್ಬರನ್ನೂ ದರೋಡೆ ಮಾಡಲು ಬಂದ ಕಳ್ಳ ರು ಎಂದು ಕಾರಿನ ಒಳಗಿದ್ದವರು ಭಾವಿಸಿದ್ದಾರೆ. 

ಇವರಿಬ್ಬರೂ ಕಾರಿಗೆ ಅಡ್ಡ ಹಾಕಿ ಆವಾಜ್ ಹಾಕಿರುವ ಆರೋಪ ಕೇಳಿಬಂದಿದ್ದು ಇದರಿಂದಾಗಿ ಭಯದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬ ಮೈಕೋ ಲೇಔಟ್ ಠಾಣೆಗೆ ಹೋಗಿ ದೂರು ನೀಡಿದೆ. ದೂರಿನಲ್ಲಿ ರಾಬರಿ ಮಾಡೋಕೆ ಯತ್ನಿಸಿದ್ದಾರೆ ಎಂದು ಕಾರಿನವರು ಉಲ್ಲೇಖಿಸಿದ್ದಾರೆ.

ಈ ದೂರಿನ ಅನ್ವಯ ಎಂಜಿನಿಯರ್ ಪದವೀಧರ ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದ್ದು ಪೊಲೀಸರು ಬೈಕ್ ವಶಕ್ಕೆ ಪಡೆದಿದ್ದಾರೆ. ಸದ್ಯ ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net