ಡಿಕೆಶಿ ಪುತ್ರಿ, ಎಸ್​.ಎಂ.ಕೃಷ್ಣ ಮೊಮ್ಮಗನ ನಿಶ್ಚಿತಾರ್ಥ; ಗಣ್ಯರನೇಕರ ಉಪಸ್ಥಿತಿ, ಹಾರೈಕೆ

F2
Published on

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ಅವರ ಮೊಮ್ಮಗ ಅಮಾರ್ತ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರ ನಿಶ್ಚಿತಾರ್ಥ ಇಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಅದ್ದೂರಿಯಾಗಿ ನೆರವೇರುತ್ತಿದೆ.

ಇಬ್ಬರು ರಾಜಕಾರಣಿಗಳ ಕುಟುಂಬಸ್ಥರ ಈ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಕೂಡ ತೆರಳಿ, ಶುಭ ಹಾರೈಸಿದ್ದಾರೆ. ನಗರದ ತಾಜ್ ಹೋಟೆಲ್​ನಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಈ ಸಮಾರಂಭಕ್ಕೆ ಆಹ್ವಾನಿತ ಗಣ್ಯರಿಗಷ್ಟೇ ಪ್ರವೇಶವಿದ್ದು, ಈಗಾಗಲೇ ಸಾಕಷ್ಟು ಮಂದಿ ಆಗಮಿಸಿ ಶುಭ ಹಾರೈಸಿದ್ದಾರೆ.

ಇವರಿಬ್ಬರ ನೆಂಟಸ್ತನದ ಕುರಿತು ಬಹಳ ಹಿಂದೆಯೇ ಮಾಹಿತಿ ಬಹಿರಂಗಗೊಂಡಿದ್ದು, ಇಂದು ನಿಶ್ಚಿತಾರ್ಥ ನೆರವೇರುತ್ತಿದೆ. ಸಮಾರಂಭದಲ್ಲಿ ಎಸ್​.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್​ ಕುಟುಂಬಸ್ಥರು, ಆಪ್ತರ ಜತೆಗೆ ಸಾಕಷ್ಟು ವಿವಿಧ ರಂಗದ ಸಾಕಷ್ಟು ಗಣ್ಯರು ಕೂಡ ಉಪಸ್ಥಿತರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net