ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸಿ

hhr
ಹೊಳೆಹೊನ್ನೂರು ಸಮೀಪದ ಅಶೋಕ ನಗರ-1 ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾನ್ವಿತ ಮಕ್ಕಳಿಗೆ ಕೃಷಿಕ ವಿಜಯಕುಮಾರ್ ಸರ್ಜಿ ನಗದು ಪುರಸ್ಕಾರ ನೀಡಿದರು. ಮಂಜುನಾಥ್, ದೀಪಿಕಾ, ರಂಗನಾಥ್ ಇತರರಿದ್ದರು.
Published on

ಹೊಳೆಹೊನ್ನೂರು: ವಿದ್ಯೆ ಎಂಬುದು ಬದುಕಿಗೆ ಬಂಗಾರ, ಬಾಳಿಗೆ ಆಧಾರ ಇದ್ದಂತೆ ಎಂದು ಅಶೋಕನಗರ ಗ್ರಾಮದ ಕಷಿಕ ಹಾಗೂ ಶಿಕ್ಷಣ ಪ್ರೇಮಿ ವಿಜಯಕುಮಾರ್ ಸರ್ಜಿ ಹೇಳಿದರು.

ಸಮೀಪದ ಅಶೋಕ ನಗರ-1 ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ವಿಶೇಷ ಪೂಜೆ ಕಾರ್ಯಕ್ರಮದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಮಕ್ಕಳಲ್ಲಿ ಹಲವು ರೀತಿಯ ಪ್ರತಿಭೆ ಇರುತ್ತದೆ. ಪಾಲಕರು, ಶಿಕ್ಷಕರು ಹಾಗೂ ಸ್ಥಳೀಯರು ಅವರನ್ನು ಗುರುತಿಸಿ ಉತ್ತೇಜಿಸಿದರೆ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

2024-25ರಲ್ಲಿ 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಕೋಮಲ್‌ಗೆ 25 ಸಾವಿರ, ದ್ವಿತೀಯ ಸ್ಥಾನ ಪಡೆದ ಕಾವ್ಯಾಗೆ 15 ಸಾವಿರ ರೂ. ಮೌಲ್ಯದ ಚೆಕ್ ವೈಯಕ್ತಿಕವಾಗಿ ನೀಡಿದರು. ಮುಖ್ಯಶಿಕ್ಷಕ ನಾಗೇಂದ್ರಪ್ಪ ಹಾಗೂ ಹಿರಿಯ ಶಿಕ್ಷಕಿ ಒ.ರೇಣುಕಾ ಅವರು 1ರಿಂದ 6 ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ ತಲಾ 2000 ಹಾಗೂ 1000 ರೂ. ನೀಡಿ ಪುರಸ್ಕರಿಸಲಾಯಿತು.

ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಗ್ರಾಪಂ ಉಪಾಧ್ಯಕ್ಷ ಮಂಜುನಾಥ್, ಎಸ್‌ಡಿಎಂಸಿ ಅಧ್ಯಕ್ಷೆ ದೀಪಿಕಾ, ಸಿಆರ್‌ಪಿ ರಂಗನಾಥ್, ಸುಬ್ರಮಣಿ, ಸಚಿನ್ ಗೌಡ, ಮೋಹನ್, ತಾಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಖಜಾಂಜಿ ಹನುಮಂತಪ್ಪ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net