

ನವದೆಹಲಿ: ಇತ್ತೀಚೆಗೆ ವಿಚಿತ್ರ ನಿರ್ಧಾರಗಳಿಂದ ಎಲಾನ್ ಮಸ್ಕ್ ನಿತ್ಯವೂ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ. ನಿನ್ನೆ ತಾನೆ ಹೆಚ್ಚು ಕೆಲಸ ಮಾಡಲ್ಲಾ ಅಂದ್ರೆ ಕೆಲಸ ಬಿಡಿ ಎಂದು ಮಸ್ಕ್ ತಮ್ಮ ಉದ್ಯೋಗಿಗಳಿಗೆ ಮೇಲ್ ಕಲಿಸಿದ್ದರು. ಬ್ಲೂ ಟಿಕ್ಗೆ ಹಣ ನಿಗದಿ ಮಾಡಿದ ಮೇಲಂತೂ ಟ್ವಿಟರ್ ಸಮಸ್ಯೆಗಳ ಆಗರವಾಗಿತ್ತು. ಈಗ ಎಲಾನ್ ಮಸ್ಕ್ ಮೀಟಿಂಗ್ನಲ್ಲಿ ಮಾತಾನಾಡುತ್ತಿರುವಾಗಲೇ ಅವರ ಉದ್ಯೋಗಿಗಳು ಹೊರನಡೆದಿದ್ದಾರೆ.
ಗುರುವಾರ ಸಂಜೆ 5 ಗಂಟೆ ಒಳಗಾಗಿ ಮಸ್ಕ್ ಟ್ವಿಟರ್ನಲ್ಲಿ ಉಳಿಯಬೇಕೆ ಅಥವಾ ಕೆಲಸ ತೊರೆಯಬೇಕೆ ಎಂದು ಆಯ್ಕೆ ಮಾಡಲು ಉದ್ಯೋಗಿಗಳಿಗೆ ಗಡುವು ನೀಡಿದ್ದರು. ಈಗ ನೂರಾರು ಟ್ವಿಟರ್ ಉದ್ಯೋಗಿಗಳು ಮೂರು ತಿಂಗಳೊಳಗೆ ಟ್ವಿಟರ್ನಿಂದ ನಿರ್ಗಮಿಸಲು ನಿರ್ಧರಿಸಿದ್ದಾರೆ. ಟ್ವಿಟರ್, ಇಮೇಲ್ ಮೂಲಕ ಮುರು ದಿನಗಳ ಕಾಲ ತಮ್ಮ ಕಚೇರಿ ಕಟ್ಟಡಗಳನ್ನು ಮುಚ್ಚುವುದಾಗಿ ಹೇಳಿ. ಸೋಮವಾರದವರೆಗೆ ಉದ್ಯೋಗಿಗಳಿಗೆ ಕಟ್ಟಡದೊಳಗೆ ಪ್ರವೇಶವನ್ನು ನಿರಾಕರಿಸಿತ್ತು.
ಇಂತಹ ಕಠಿಣ ಸಮಯದಲ್ಲಿ ಮಸ್ಕ್, ತಮ್ಮ ಸಲಹೆಗಾರರು ಮತ್ತು ನಿರ್ಣಾಯಕ ಎಂದು ಪರಿಗಣಿಸಲಾದ ಕೆಲವು ಟ್ವಿಟರ್ ಉದ್ಯೋಗಿಗಳೊಂದಿಗೆ ಸಭೆಗಳನ್ನು ನಡೆಸಿದ್ದಾರೆ ಎನ್ನಲಾಗಿದೆ. ಇವರಿಗೆ ಉದ್ಯೋಗಿಗಳು ಕಂಪೆನಿ ತೊರೆಯದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನೀಡಲಾಗಿದೆ. ಮಸ್ಕ್ ತಮ್ಮ ಭಾಷಣದಲ್ಲಿ 'ನನಗೆ ಗೆಲ್ಲೋದು ಹೇಗೆ ಎಂದು ತಿಳಿದಿದೆ. ಗೆಲ್ಲಲು ಬಯಸುವವರು ನನ್ನೊಡನೆ ಸೇರಿ' ಎಂದು ಹೇಳಿದ್ದಾರೆ.
ಸಾನ್ಫ್ರಾನ್ಸಿಸ್ಕೋದಲ್ಲಿ ಇತ್ತೀಚೆಗೆ ಒಂದು ಸಭೆ ಸೇರಿಸಲಾಗಿತ್ತು. ಅಲ್ಲಿ ಕೆಲವರು ನೇರವಾಗಿ ಸಭೆಗೆ ಹಾಜರಾದರೆ ಕೆಲವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸೇರಿದ್ದರು. ಎಲಾನ್ ಮಸ್ಕ್ ನೀಡಿದ್ದ ಸಂಜೆ 5 ಗಂಟೆಯ ಗಡುವು ಮುಗಿಯುತ್ತಿದ್ದಂತೆಯೇ ಅನೇಕರು ವಿಡಿಯೋ ಕಾನ್ಫರೆನ್ಸ್ಅನ್ನು ತೊರೆದಿದ್ದಾರೆ. ಇವರು ಟ್ವಿಟರ್ಅನ್ನು ಬಿಡುವ ನಿರ್ಧಾರ ಮಾಡಿದ್ದರು ಎನ್ನಲಾಗಿದೆ.
ಇದಾದ ಮೇಲೆ ಟ್ವಿಟರ್ ಉದ್ಯೋಗಿಗಳು rip twitter ಎನ್ನುವ ಹ್ಯಾಷ್ಟ್ಯಾಗ್ಅನ್ನು ಟ್ರೆಂಡ್ ಮಾಡಲು ಪ್ರಾರಂಭಿಸಿದ್ದಾರೆ. ಈ ಟ್ರೆಂಡ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೆ ಎಲನ್ ಮಸ್ಕ್ ಸಂಸ್ಥೆಯ ಬಗ್ಗೆ ಹಲವಾರು ರಹಸ್ಯ ಮಾಹಿತಿಗಳನ್ನು ಹಮಚಿಕೊಂಡಿದ್ದಾರೆ. ಇದಾದ ಮೇಲೆ ಟ್ವಿಟರ್ ವೇದಿಕೆಯ ಭವಿಷ್ಯದ ಬಗ್ಗೆ ನೆಟ್ಟಿಗರಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿವೆ. ನಂತರ ಎಲಾನ್ ಮಸ್ಕ್ ತಲೆಬುರುಡೆ ಇರುವ ಕಡಲ್ಗಳ್ಳರ ಚಿಹ್ನೆಯನ್ನು ಟ್ವೀಟ್ ಮಾಡಿದ್ದಾರೆ. (ಏಜೆನ್ಸೀಸ್)