ತಿರುಪತಿಯ ದೇವಸ್ಥಾನದಲ್ಲಿ ಅರ್ಧ ಕೆಜಿ ಚಿನ್ನ ಕದ್ದ ನೌಕರ ಬಂಧನ: ಸೆರೆ ಸಿಕ್ಕಿದ್ದೇಗೆ ಗೊತ್ತೆ? | Tirupati Temple

dk (11)
Published on

ತಿರುಪತಿ: ತಿರುಮಲ ತಿರುಪತಿ(Tirupati Temple) ದೇವಸ್ಥಾನದ (ಟಿಟಿಡಿ) 40 ವರ್ಷದ ಹೊರಗುತ್ತಿಗೆ ನೌಕರನನ್ನು ಇಲ್ಲಿನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಕ್ತರು ದೇವರಿಗೆ ಕಾಣಿಕೆಯಾಗಿ ಸ್ವೀಕರಿಸಿದ ಅರ್ಧ ಕೆಜಿಗೂ ಹೆಚ್ಚು ಚಿನ್ನವನ್ನು ಕದ್ದ ಆರೋಪದ ಮೇಲೆ ಮಂಗಳವಾರ ಬಂಧಿಸಲಾಗಿದೆ.

ಕಳೆದ ಒಂದು ವರ್ಷದಲ್ಲಿ 10 ರಿಂದ 15 ಬಾರಿ ಬಿಸ್ಕೆಟ್ ಮತ್ತು ಆಭರಣಗಳ ರೂಪದಲ್ಲಿ 46 ಲಕ್ಷ ರೂಪಾಯಿ ಮೌಲ್ಯದ 650 ಗ್ರಾಂ ಚಿನ್ನವನ್ನು ಕದ್ದ ಆರೋಪದ ಮೇಲೆ ವಿ.ಪೆಂಚಲಯ್ಯ ಎಂಬ ಗುತ್ತಿಗೆ ನೌಕರನ್ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಕ್ತರು ನೀಡಿದ ನಗದು, ಚಿನ್ನ, ಆಭರಣ ಮತ್ತು ಇತರ ಕಾಣಿಕೆಗಳನ್ನು ವಿಂಗಡಿಸಲಾಗುತ್ತದೆ. ಇತರ ಬೆಲೆಬಾಳುವ ವಸ್ತುಗಳನ್ನು ಸಂರಕ್ಷಿಸುವಾಗ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಮಾಡುವ ಕಾರ್ಯ ದಿನನಿತ್ಯ ನಡೆಯುತ್ತದೆ. ಆರೋಪಿ ಪೆಂಚಲಯ್ಯ ದೇವರಿಗೆ ಕಾಣಿಕೆಗಳನ್ನು ವಿಂಗಡಿಸುವ ಸಂದರ್ಭದಲ್ಲಿ ದೇವರಿಗೆ ಅರ್ಪಿಸಿದ ಚಿನ್ನವನ್ನು ಕದಿಯುವುದರಲ್ಲಿ ತೊಡಗಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಲ್ಲಿಂದ ಚಿನ್ನ ಕದ್ದು ಪರಾರಿಯಾಗಿದ್ದ. ಆರೋಪಿ ಹೋದಲೆಲ್ಲಾ ಸಿಸಿ ಕ್ಯಾಮರಾ ಪರಿಶೀಲನೆ ಬಳಿಕ ಸೆರೆ ಸಿಕ್ಕಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net