

ಕೋಲಾರ: ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ, ಜನರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಸಂಸದ ಎಂ.ಮಲ್ಲೇಶ್‌ಬಾಬು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರದ ಸಹಕಾರವು ಅಗತ್ಯ, ರೈಲು ಮಾರ್ಗ, ರಾಷ್ಟೀಯ ಹೆದ್ದಾರಿ ಹಾಗೂ ಕೈಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಜಿಲ್ಲೆಯ ಕೆಜಿಎಫ್ ಸಮೀಪದಲ್ಲಿ ಕೈಗಾರಿಕೆಗೆ ಬಿಜಿಎಂಎಲ್‌ನ 12 ಸಾವಿರ ಎಕರೆ ಸಿದ್ಧವಿದೆ. ಜಾಗವನ್ನು ಬಳಸಿಕೊಂಡರೆ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲು ಸಹಕಾರಿಯಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಸದ್ಯ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಹೈವೇ ನಿರ್ಮಾಣಗೊಂಡಿದ್ದು, ಚೆನ್ನೈ ಕಡೆಗೆ ಹಾಗೂ ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಓಡಾಡಲು ಸಾಕಷ್ಟು ಅನುಕೂಲವಾಗಲಿದೆ. ಹೀಗಾಗಿ ಯಾರಾದರೂ ಬಂದು ಆರಂಭಿಸಿದರೆ ಅವರಿಗೂ ಎಲ್ಲ ರೀತಿಯ ಅನುಕೂಲಗಳಾಗಲಿದ್ದು, ಕೋಲಾರದ ಅದೃಷ್ಟ ಹೇಗಿದೆ ಎನ್ನುವುದನ್ನು ನೋಡಬೇಕಿದೆ ಎಂದರು.
ಬೆಂಗಳೂರಿನ ವೈಟ್‌ಫೀಲ್ಡ್‌ನಿಂದ ಕೋಲಾರಕ್ಕೆ, ಕೋಲಾರದಿಂದ ಮಾದಘಟ್ಟವರೆಗೆ ನೂತನ ರೈಲ್ವೇ ಮಾರ್ಗ ನಿರ್ಮಿಸುವ ವಿಚಾರ ಈಗಾಗಲೇ ಸರ್ಕಾರದ ಮಟ್ಟದಲ್ಲಿದೆ. ಭೂಸ್ವಾಽÃನ ಪ್ರಕ್ರಿಯೆ ತಡವಾಗಿರುವುದರಿಂದ ಯೋಜನೆಯು ಆರಂಭಗೊAಡಿಲ್ಲ. ರಾಜ್ಯ ಸರ್ಕಾರ ಶೀಘ್ರ ಪರಿಗಣಿಸಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಚಿಂತಾಮಣಿ ಚೇಳೂರು ವೃತ್ತದಿಂದ 200 ಮೀ. ಭೂಸ್ವಾಧಿನ ಬಾಕಿ ಇರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಶೀಘ್ರ ಅದನ್ನು ಪೂರ್ಣಗೊಳಿಸಲಾಗುವುದು. ಶ್ರೀನಿವಾಸಪುರ ಬಳಿ ವರ್ಕ್ಶಾಪ್ ಆರಂಭಿಸುವ ವಿಚಾರವು ರೈಲ್ವೆ ಮಂಡಳಿಯಲ್ಲಿ ಚರ್ಚೆ ಆಗಬೇಕಿದೆ. ನರಸಾಪುರದಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಿಸುವ ಕುರಿತು ಚರ್ಚಿಸಲಾಗುವುದು ಎಂದರು.
ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಹಾಜರಿದ್ದರು.