ಹೊಳಲ್ಕೆರೆ ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಶಾಲೆಗೆ ಭೂಮಿ ಪೂಜೆ

m1
Published on

ಹೊಳಲ್ಕೆರೆ: ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ವೈದ್ಯರು ಸ್ಪಂದಿಸಬೇಕು ಎಂದು ಶಾಸಕ ಡಾ.ಎಂ. ಚಂದ್ರಪ್ಪ ಸೂಚಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಡುಗೆ ಕೋಣೆ, ಪ್ರಯೋಗಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸಾರ್ವಜನಿಕರ ಕೆಲಸವನ್ನು ತಮ್ಮ ಮನೆಯ ಬದುಕೆಂದು ಭಾವಿಸಿ ಮಾಡುತ್ತಿದ್ದೇನೆ. ಪುರಸಭೆ ಕಟ್ಟಡ ಅತ್ಯಂತ ಚಿಕ್ಕದಾಗಿತ್ತು. ಈಗ ಸುಂದರವಾಗಿ ಕಾಣುವ ರೀತಿಯಲ್ಲಿ ರೂಪಿಸಲಾಗಿದೆ. ಇಪ್ಪತ್ತು ಕೋಟಿ ರೂ. ವೆಚ್ಚದಲ್ಲಿ ಸಂವಿಧಾನ ಸೌಧ, ಎಂಟು ಕೋಟಿ ರೂ. ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಎಂಟು ಕೋಟಿ ರೂ.ಗಳಲ್ಲಿ ಆಸ್ಪತ್ರೆ ಕಾಮಗಾರಿಗಳು, 25 ಕೋಟಿ ರೂ. ಪದವಿ ಕಾಲೇಜಿಗೆ, ಏಳು ಕೋಟಿ ರೂ. ಎಂ.ಎಂ. ಕಾಲೇಜಿಗೆ. ಹತ್ತು ಕೋಟಿ ರೂ. ಕ್ರೀಡಾಂಗಣ ನಿರ್ಮಾಣಕ್ಕೆ ಖರ್ಚು ಮಾಡಿದ್ದೇನೆ ಎಂದು ತಿಳಿಸಿದರು.

ಇಲ್ಲಿನ ಪ್ರಯೋಗಾಲಯ ಮತ್ತು ಅಡುಗೆ ಕೋಣೆಯನ್ನು ಇನ್ನು ಆರು ತಿಂಗಳಲ್ಲಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರು ಜೀವದ ಹಂಗು ತೊರೆದು ಕೆಲಸ ಮಾಡಿದರು. ಅವರ ಸೇವೆ ಅನನ್ಯವಾದುದು, ಅವರಿಗೆ ಗೌರವಧನ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ಟಿಎಚ್‌ಒ ಡಾ. ರೇಖಾ, ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನ ವೇದಮೂರ್ತಿ, ಮುಖ್ಯಾಧಿಕಾರಿ ರೇಣುಕ ದೇಸಾಯಿ, ಡಾ. ವಿನಯ್, ಪುರುಸಭೆ ಸದಸ್ಯರಾದ ಆರ್.ಎ. ಅಶೋಕ್, ಕೆ.ಸಿ. ರಮೇಶ್, ಮಲ್ಲಿಕಾರ್ಜುನಸ್ವಾಮಿ, ಮುರುಗೇಶ್, ಸುಧಾ ಬಸವರಾಜ್, ರುದ್ರಪ್ಪ, ಸೈಯದ್ ಮನ್ಸೂರ್, ಪೂರ್ಣಿಮಾ ಬಸವರಾಜ್, ಮಮತಾ ಜಯಸಿಂಹ ಖಾಟ್ರೋತ್, ಆಸ್ಪತ್ರೆ ಎಆರ್‌ಎಸ್ ಸಮಿತಿ ಅಧ್ಯಕ್ಷ ಜಗದೀಶ್ ನಾಡಿಗೇರ್, ನಟರಾಜ್, ರಮೇಶ್, ಸಾರ್ವಜನಿಕ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net