

ಶಿರಾಳಕೊಪ್ಪ: ರಾಜಕಾರಣಿಗಳನ್ನು ಹುಟ್ಟು ಹಾಕುವ ಕ್ಷೇತ್ರವೆಂದರೆ ಸಹಕಾರ ಕ್ಷೇತ್ರ ಎಂದು ಸಹಕಾರ ಸಂಘಗಳ ಉಪ ನಿಬಂಧಕ ವಾಸುದೇವ ಹೇಳಿದರು.
ವಯೋನಿವೃತ್ತಿಯ ನಂತರ ಬಸವೇಶ್ವರ ಬ್ಯಾಂಕ್‌ನಲ್ಲಿ ಮಂಗಳವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 33 ವಷರ್ಗಳ ಸೇವೆಯಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೆ ನಿವೃತ್ತಿ ಹೊಂದಿರುವುದು ನನಗೆ ಹೆಮ್ಮೆ ಇದೆ. ನಮ್ಮ ಇಲಾಖೆಯಲ್ಲಿ ರಾಜಕೀಯ ಅತ್ಯಂತ ಪ್ರಮುಖ ಪಾತ್ರ ವಹಿಸುವ ಕಾರಣ ಇಲ್ಲಿ ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ ಎಂದು ತಿಳಿಸಿದರು.
ಬ್ಯಾಂಕಿನ ಲೆಕ್ಕ ಪರಿಶೋಧಕ ಶಿವಮೊಗ್ಗ ನರೇಂದ್ರ ಮಾತನಾಡಿ, ಸರಳ ವ್ಯಕ್ತಿಯಾಗಿದ್ದ ವಾಸುದೇವ ಎಲ್ಲರೊಂದಿಗೆ ಸೌಹಾರ್ದತೆಯಿಂದ ವರ್ತಿಸುತ್ತಿದ್ದರು ಎಂದು ತಿಳಿಸಿದರು.
ಬ್ಯಾಂಕಿನ ಹಿರಿಯ ನಿರ್ದೇಶಕ ಚಂದ್ರಮೌಳಿ ಮಾತನಾಡಿ, ನಿವೃತ್ತಿ ಹೊಂದಿದರೂ ವಾಸುದೇವ ಅವರ ಸಲಹೆ, ಸಹಕಾರ ನಮಗೆ ಸದಾ ದೊರಕುವಂತಾಗಲಿ ಎಂದು ಆಶಿಸಿದರು.
ಬ್ಯಾಂಕಿನ ಅಧ್ಯಕ್ಷ ವೇದಮೂರ್ತಿ, ಉಪಾಧ್ಯಕ್ಷ ಮಹಾಗಣಪತಿ, ಸಹಕಾರ ಅಭಿವೃದ್ಧಿ ಅಧಿಕಾರಿ ಅರವಿಂದ, ಕಾರ್ಯದಶಿರ್ ಮಹದೇವ, ನಿರ್ದೇಶಕರಾದ ಡಾ. ಮುರುಘರಾಜ್, ಎಚ್.ಎಂ.ಗಂಗಮ್ಮ, ನಟರಾಜ್, ಶೇಷಗಿರಿ, ಅಶೋಕ, ಆನಂದಪ್ಪ, ಷಣ್ಮುಖಪ್ಪ, ಉಮೇಶ್, ನಿವೇದಿತಾ ಇದ್ದರು.