ಡಾ.ರಾಜ್‌ರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಿ

24 CRP-2A
Published on

ಚನ್ನರಾಯಪಟ್ಟಣ: ಡಾ.ರಾಜ್‌ಕುಮಾರ್ ಅವರ ಅಭಿನಯ ಮತ್ತು ಸರಳತೆಗೆ ಯಾರೂ ಸಾಟಿ ಇಲ್ಲ. ಅವರ ತತ್ವ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಡಿವೈಎಸ್‌ಪಿ ಎನ್.ಕುಮಾರ್ ತಿಳಿಸಿದರು.

ಪಟ್ಟಣದ ರಾಜಕುಮಾರ್ ರಸ್ತೆಯಲ್ಲಿ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಡಾ. ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ರಾಜ್‌ಕುಮಾರ್ ಅವರು ಕನ್ನಡದ ಆಸ್ತಿ. ಅವರ ಅಭಿನಯವನ್ನು ಯಾರೂ ಮೀರಿಸಲು ಸಾಧ್ಯವಿಲ್ಲ. ಅವರ ಶಿಸ್ತು ಹಾಗೂ ನಟನೆ ಬೇರೆ ಭಾಷೆಯ ನಟರನ್ನು ನಾಚಿಸುವಂತಿದ್ದು ಅವರಂತಹ ಮೇರು ನಟರನ್ನು ಪಡೆದ ಕನ್ನಡಿಗರಾದ ನಾವೇ ಪುಣ್ಯವಂತರು. ಅವರ ನಟನೆಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವಂತಿದ್ದವು. ಅವರ ಸಿನಿಮಾಗಳಲ್ಲಿ ಯಾವುದೇ ಕೆಟ್ಟ ಚಟಗಳನ್ನು ತೋರಿಸುತ್ತಿರಲಿಲ್ಲ. ಆದರೆ ಇತ್ತೀಚೆಗೆ ಬರುವ ಸಿನಿಮಾಗಳಲ್ಲಿ ಯಾವುದೇ ಸಂದೇಶ ಇರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಮತೆಯ ಮಡಿಲು ಆಸ್ಪತ್ರೆ ವೈದ್ಯ ಡಾ.ರಮೇಶ್‌ಬಾಬು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ.ರಾಜ್‌ಕುಮಾರ್ ಸಂಘದ ಅಧ್ಯಕ್ಷ ಪುಟ್ಟಣ್ಣ ಗೋಕಾಕ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಪುರಸಭೆ ಮಾಜಿ ಅಧ್ಯಕ್ಷೆ ಬನಶಂಕರಿ ರಘು, ಸದಸ್ಯೆ ಸುಜಾತಾ, ರೈತ ಸಂಘದ ತಾಲೂಕು ಅಧ್ಯಕ್ಷ ಸಿ.ಜಿ.ರವಿ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ದಿನೇಶ್, ಮಹೇಶ್, ನಂದನ್, ಪ್ರೇಮಮ್ಮ, ತೇಜಸ್‌ಗೌಡ, ಪುರುಷೋತ್ತಮ್, ಶಾಂತರಾಜ್, ಕೃಷ್ಣಮೂರ್ತಿ ಮೆಡಿಕಲ್, ಶಂಕರಾಚಾರ್, ರಾಮಚಂದ್ರು, ರುದ್ರೇಶ್‌ಗೌಡ, ತೀರ್ಥ ಸೇರಿದಂತೆ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net