

ಬೆಂಗಳೂರು: ರಾ. ಸೂರ್ಯ ನಿರ್ದೇಶನದ ಸಿನಿಮಾ ‘ಎಲ್ಟು ಮುತ್ತಾ’. ಇತ್ತೀಚೆಗಷ್ಟೆ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಯಿತು. ವಿಜಯ್ ಕಿರಗಂದೂರು ಪತ್ನಿ ಶೈಲಜಾ, ಸಂಗೀತಾ ಕಟ್ಟಿ ಹಾಗೂ ಎಎಂಆರ್ ರಮೇಶ್ ಪೋಸ್ಟರ್ ರಿಲೀಸ್ ಮಾಡಿ ಹೊಸಬರ ತಂಡಕ್ಕೆ ಸಾಥ್ ನೀಡಿದರು.
ಚಿತ್ರದ ಬಗ್ಗೆ ನಿರ್ದೇಶಕ ರಾ. ಸೂರ್ಯ, ‘ಸಾವಿಗೆ ಡೋಲು ಬಡಿಯುವವರ ಕಥೆಯನ್ನು ಸಿನಿಮಾ ಮಾಡಿದ್ದೇನೆ. ಇದು ಸತ್ಯ ಘಟನೆಯ ಆಧಾರಿತ ಸಿನಿಮಾ. ಸಿನಿಮಾದಲ್ಲಿ 4 ಹಾಡುಗಳಿವೆ’ ಎಂದು ಮಾಹಿತಿ ಹಂಚಿಕೊಂಡರು. ಈ ಚಿತ್ರದ ಮೂಲಕ ‘ಎಲ್ಟು ಮುತ್ತಾ’ ಪಾತ್ರದಲ್ಲಿ ನಾಯಕನಾಗಿ ಶೌರ್ಯ ಪ್ರತಾಪ್ ಡೆಬ್ಯೂ ಮಾಡುತ್ತಿದ್ದಾರೆ. ನಾಯಕಿಯಾಗಿ ಪ್ರಿಯಾಂಕಾ ನಟಿಸಿದ್ದಾರೆ. ಜತೆಗೆ ಕಾಕ್ರೋಚ್ ಸುಧಿ, ಯಮುನಾ ಶ್ರೀನಿಧಿ, ನವೀನ್ ಪಡೀಲ್ ಮುಖ್ಯ ತಾರಾಬಳಗದಲ್ಲಿದ್ದಾರೆ. ಬೆಂಗಳೂರು ಸುತ್ತಮುತ್ತ ಹಾಗೂ ಮಡಿಕೇರಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಸದ್ಯ ಡಬ್ಬಿಂಗ್ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ರಿಲೀಸ್ ದಿನಾಂಕ ೋಷಣೆ ಮಾಡುವ ಆಲೋಚನೆ ಚಿತ್ರತಂಡದ್ದು.
ಉಳಿದಂತೆ ಪ್ರಸನ್ನ ಕೇಶವ ಸಂಗೀತ, ಮೆಯ್ಯಪ್ಪ ಭಾಸ್ಕರ್ ಛಾಯಾಗ್ರಹಣ, ಕೆ. ಯೇಸು ಸಂಕಲನ, ಜ್ಞಾನತಿ ರಾಹುಲ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ.