

ಕ್ಯಾನ್ಬೆರಾ(ಆಸ್ಟ್ರೇಲಿಯಾ): ಎಲೋನ್ ಮಸ್ಕ್ ಅವರ ಮೈಕ್ರೋಬ್ಲಾಗಿಂಗ್ ಸೈಟ್ "x"(ಎಕ್ಸ್)ಗೆ ಆಸ್ಟ್ರೇಲಿಯನ್ ಇ-ಸೇಫ್ಟಿ ಕಮಿಷನ್ ಭಾರಿ ದಂಡ ವಿಧಿಸಿದೆ. 86ಸಾವಿರ ಡಾಲರ್ಗಳ ಈ ದಂಡ ಭಾರತೀಯ ಕರೆನ್ಸಿಯಲ್ಲಿ 3-2 ಕೋಟಿ ರೂ.ಗೆ ಸಮಾನವಾಗಿದೆ.
ಸಾಮಾಜಿಕ ಮಾಧ್ಯಮಗಳ ಮೇಲೆ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಂಟೆಂಟ್ ಮೇಲೆ ನಿತ್ಯ ನಿಗಾ ಇಡಲಾಗುತ್ತದೆ. ಆಯಾ ರಾತ್ರಿ ಈ ತರಹದ ಕಂಟೆಂಟ್ಗಳನ್ನು ಇಷ್ಟು ತ್ವರಿತವಾಗಿ ಗುರುತಿಸಿದರು? ಪರಿಶೀಲಿಸಿದರು ಎಂಬ ಬಗ್ಗೆ ನಿಯಂತ್ರಣ ಸಂಸ್ಥೆಗಳು ಹದ್ದಿನ ಕಣ್ಣಿಟ್ಟಿರುತ್ತವೆ. ಆದರೆ ಎಕ್ಸ್ ಚೈಲ್ಡ್ ಅಬ್ಯೂಸ್(ಮಕ್ಕಳ ಲೈಂಗಿಕ ದೌರ್ಜನ್ಯ) ಪ್ರಕರಣ ಸಂಬಂಧ ತನಿಖೆಗೆ ಸಹಕರಿಸಲು ನಿರಾಕರಿಸಿತ್ತು. ಇದು ಆಸ್ಟ್ರೇಲಿಯಾದ ಇ-ಸೇಫ್ಟಿ ಕಮಿಷನ್ (ನಿಯಂತ್ರಣ ಪ್ರಾಧಿಕಾರ)ದ ಕೆಮಗಣ್ಣಿಗೆ ಕಾರಣವಾಗಿತ್ತು. ಹೀಗಾಗಿ ದಂಡ ವಿಧಿಸಿದೆ.
ಇದು ಕಂಟೆಂಟ್ ನಿಯಂತ್ರಣದಲ್ಲಿ ವಿಫಲವಾಗುತ್ತಿದೆ ಎಂಬ ಆರೋಪದ ಬೆನ್ನಲ್ಲೇ ದಂಡ ವಿಧಿಸಿರುವುದು ಮಕ್ಕಳ ಮೇಲಿನ ದೌರ್ಜನ್ಯದ ವರದಿಗಳಿಗೆ ಪ್ರತಿಕ್ರಿಯಿಸಲು ತೆಗೆದುಕೊಂಡ ಸಮಯ ಮತ್ತು ಅದನ್ನು ಪತ್ತೆಹಚ್ಚಲು ಬಳಸಿದ ವಿಧಾನಗಳು, ಜಾಹೀರಾತುದಾರರನ್ನು ಹಿಡಿದಿಡ್ಡುಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಎಕ್ಸ್ಗೆ ಪ್ರಬಲ ಹೊಡೆತ ಬಿದ್ದಿದೆ ಎನ್ನಬಹುದು.
ಭಾರತದಲ್ಲೂ ನೋಟೀಸ್:
ದೇಶದ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ ಸಚಿವಾಲಯ(meity) ಸಹ ಮಕ್ಕಳ ಲೈಂಗಿಕ ಕಿರುಕುಳ ವಿಷಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಪ್ಲಾಟ್ಫಾರ್ಮ್ನಿಂದ ಕೂಡಲೇ ತೆಗೆದುಹಾಕಬೇಕೆಂದು ನೋಟೀಸ್ಗಳನ್ನು ಜಾರಿಗೊಳಿಸಿ ಎಚ್ಚರಿಕೆ ನೀಡಿದೆ. ಮುಂದಿನ ದಿನಗಳಲ್ಲಿ ಸುಧಾರಿತ ಅಲ್ಗಾರಿಥಮ್, ರಿಪೋರ್ಟಿಂಗ್ ಮೆಕಾನಿಸಮ್ ನಂತಹ ತ್ವರಿತಗತಿಯಲ್ಲಿ ಕೆಲಸ ಮಾಡುವ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಇದನ್ನು ಪಾಲಿಸದಿದ್ದರೆ 2021 ರೂಲ್ 3(1)(ಬಿ), ಮತ್ತು ರೂಲ್ 4(4) ಉಲ್ಲಂಘನೆಯೆಂದು ಪರಿಗಣಿಸಲಾಗುವುದು. ಈ ಉಲ್ಲಂಘನೆ ದೃಡಪಟ್ಟರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.