ಟ್ರಂಪ್​ ಪದಗ್ರಹಣ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿದ Elon Musk; ವಿಡಿಯೋ ವೈರಲ್​

Elon Musk Dance
Published on

ವಾಷಿಂಗ್ಟನ್​: ಅಮೆರಿಕದ 47ನೇ ಆಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪದಗ್ರಹಣ ಮಾಡಿದ್ದು, ತಕ್ಷಣವೇ ಕಾರ್ಯಕಾರಿ ನಿರ್ಧಾರಗಳ ರಾಫ್ಟ್​​ಅನ್ನು ಘೋಷಿಸಿದ್ದಾರೆ. ವಾಷಿಂಗ್ಟನ್​ ಡಿಸಿಯ ಕ್ಯಾಪಿಟಲ್ ಹಿಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮೆರಿಕ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಜಾನ್ ರಾಬರ್ಟ್ಸ್ ಅವರು ಪ್ರಮಾಣ ವಚನ ಬೋಧಿಸಿದರು. ಈ ಕಾರ್ಯಕ್ರಮವು ಹಲವು ಮೊದಲುಗಳಿಗೆ ಸಾಕ್ಷಿಯಾಯಿತು.

ಟ್ರಂಪ್​ ಪದಗ್ರಹಣ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಎಲಾನ್​ ಮಸ್ಕ್​, ಭಾರತ ಸರ್ಕಾರದ ವಿದೇಶಾಂಗ ಸಚಿವ ಜೈಶಂಕರ್, ಉದ್ಯಮಿ ಮುಕೇಶ್​ ಅಂಬಾನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಟ್ರಂಪ್​ ಪದಗ್ರಹಣ ಸಮಾರಂಭದಲ್ಲಿ ಎಲಾನ್​​ ಮಸ್ಕ್ (Elon Musk)​​ ಡ್ಯಾನ್ಸ್​ ಮಾಡಿ ಸಂಭ್ರಮಿಸಿದ್ದು, ಇದಕ್ಕೆ ಸಂಭ್ರಮಿಸಿದ ವಿಡಿಯೋ ವೈರಲ್​ ಆಗಿದೆ.

ಟ್ರಂಪ್‌ ಪದಗ್ರಹಣ ಸಮಾರಂಭಕ್ಕೂ ಮುನ್ನ ನಡೆದ ರ್‍ಯಾಲಿಯಲ್ಲಿ ಎಲಾನ್‌ ಮಸ್ಕ್‌ ಕುಣಿದು ಕುಪ್ಪಳಿಸಿದ್ದಾರೆ. ಬಿಗಿಮುಷ್ಟಿ ಹಿಡಿದು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಮಸ್ಕ್‌ ನೋಡಿ ನೆರೆದಿದ್ದ ಜನ ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಬಳಿಕ ಮಾತನಾಡಿದ ಮಸ್ಕ್​ ಟ್ರಂಪ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದು ಸಾಮಾನ್ಯ ವಿಜಯವಲ್ಲ. ಚುನಾವಣೆ ನಡೆಯುತ್ತಲೇ ಇರುತ್ತದೆ. ಆದರೆ ಈ ಜಯ ಮಾನವ ನಾಗರಿಕತೆಯಲ್ಲಿ ಹೊಸ ದಾರಿ ಸೃಷ್ಟಿಸಿದೆ. ಇದನ್ನು ಸಾಧ್ಯವಾಗಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಅಮೆರಿಕದ ಗಗನಯಾತ್ರಿಗಳು ಮೊದಲ ಬಾರಿಗೆ ಮತ್ತೊಂದು ಗ್ರಹದಲ್ಲಿ ಧ್ವಜವನ್ನು ಹಾರಿಸುವುದು ಎಂದರೆ ನಿಜಕ್ಕೂ ಅದ್ಭುತ ವಿಚಾರವಾಗಿದೆ. ಮಂಗಳಗ್ರಹಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ವಿಚಾರವನ್ನು ಪ್ರಸ್ತಾಪಿಸಿ ಟ್ರಂಪ್​ಗೆ ಧನ್ಯವಾದಗಳನ್ನು ಹೇಳಿದ್ದಾರೆ.

https://www.vijayavani.net/will-not-say-r-ashwins-brutally-honest-take-on-shubman-gill-becoming-vice-captain

https://www.vijayavani.net/woman-waiting-for-bus-sexuall-assaulted-and-robbed-one-arrested-and-other-on-run

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net