

ನ್ಯೂಯಾರ್ಕ್: ಜಾಗತಿಕ ಅತಿ ಶ್ರೀಮಂತರ ಪಟ್ಟಿಯಲ್ಲಿರುವ ಉದ್ಯಮಿ ಎಲನ್ ಮಸ್ಕ್ ಕೆಲ ತಿಂಗಳ ಹಿಂದೆ ಖರೀದಿಸಿದ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ಗೆ ಹೊಸ ಸಿಇಒ ಆಗಿ ತಮ್ಮ ಮುದ್ದಿನ ನಾಯಿ ಫ್ಲೋಕಿಯನ್ನು ಸಿಇಒ ಕುರ್ಚಿಯಲ್ಲಿ ಕೂರಿಸಿ ತೆಗೆದ ಚಿತ್ರ ವೈರಲ್ ಆಗಿದೆ.
ಶಿಬಾ ಇನು ತಳಿಯ ಫ್ಲೋಕಿ, ಅದು ಹಿಂದಿನ ಸಿಇಒ ಪರಾಗ್ ಅಗರ್ವಾಲ್ಗಿಂತ ಉತ್ತಮವಾಗಿರಲಿದೆ ಎಂದು ಮಸ್ಕ್ ಪರೋಕ್ಷವಾಗಿ ಹೇಳಿ ಪರಾಗ್ ವಿರುದ್ಧದ ಅಸಹನೆಯನ್ನು ಇನ್ನೊಮ್ಮೆ ಹೊರ ಹಾಕಿದ್ದಾರೆ.
ಖ್ಯಾತ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಅನ್ನು ನೇಮಿಸುವ ಬಗ್ಗೆಯೂ ಮಸ್ಕ್ ಈ ಹಿಂದೆ ವ್ಯಂಗ್ಯವಾಗಿ ಬರೆದುಕೊಂಡಿದ್ದರು. ದುಬೈನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಸ್ಕ್, ಟ್ವಿಟರ್ಗೆ ಸದ್ಯ ತಾವೇ ಸಿಇಒ ಆಗಿದ್ದು, ಈ ಹುದ್ದೆಗೆ ಈ ವರ್ಷಾಂತ್ಯದೊಳಗೆ ಬೇರೆಯವರನ್ನು ತರಲಾಗುವುದು ಎಂದಿದ್ದಾರೆ. (ಏಜೆನ್ಸೀಸ್)