H-1B ವೀಸಾ ಪ್ರೋಗ್ರಾಂನಲ್ಲಿ ಸುಧಾರಣೆ ಅಗತ್ಯವಿದೆ; ಎಲಾನ್​ ಮಸ್ಕ್​​ ಹೀಗೆಳಿದ್ದೇಕೆ? | Elon Musk

Untitled design (65)
Published on

ವಾಷಿಂಗ್ಟನ್​​ ಡಿಸಿ: ಬಿಲಿಯನೇರ್ ಟೆಕ್ ದೈತ್ಯ ಎಲಾನ್​ ಮಸ್ಕ್(Elon Musk)​​​ H-1B ವೀಸಾ ಕುರಿತು ದೊಡ್ಡ ಹೇಳಿಕೆಯೊಂದನ್ನು ಘೋಷಿಸಿದ್ದಾರೆ.ಈ ವ್ಯವಸ್ಥೆ ಅಸ್ತವ್ಯಸ್ತವಾಗಿದ್ದು ಇದರಲ್ಲಿ ಪ್ರಮುಖ ಸುಧಾರಣೆಗಳ ಅಗತ್ಯವಿದೆ. ಎಲಾನ್​​ ಮಸ್ಕ್​​ ಮತ್ತು ಭಾರತೀಯ ಮೂಲದ ರಾಜಕಾರಣಿ ವಿವೇಕ್ ರಾಮಸ್ವಾಮಿ ಅವರು ನಿರಂತರವಾಗಿ H-1B ವೀಸಾವನ್ನು ಬೆಂಬಲಿಸುತ್ತಿದ್ದಾರೆ. ಈ ಕುರಿತು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರೊಂದಿಗೆ ಇಬ್ಬರೂ ನಾಯಕರು ವಾಗ್ವಾದ ನಡೆಸಿದ್ದಾರೆ.

H-1B ವೀಸಾ ವ್ಯವಸ್ಥೆಯು ಅಸ್ತವ್ಯಸ್ತವಾಗಿದೆ ಮತ್ತು ಪ್ರಮುಖ ಸುಧಾರಣೆಯ ಅಗತ್ಯವಿದೆ ಎಂದು ಎಲಾನ್​​ ಮಸ್ಕ್​​ ತಿಳಿಸಿದ್ದಾರೆ. ಒಂದು ಪ್ರತಿಕ್ರಿಯೆಯಾಗಿ ಕನಿಷ್ಠ ವೇತನವನ್ನು ಗಣನೀಯವಾಗಿ ಹೆಚ್ಚಿಸುವ ಮೂಲಕ ಮತ್ತು ಅಗತ್ಯವಿರುವ ವಾರ್ಷಿಕ ವೆಚ್ಚಗಳನ್ನು ಸೇರಿಸುವ ಮೂಲಕ H-1B ವೀಸಾಗಳನ್ನು ಸರಿಪಡಿಸಬಹುದು. ಇದರಿಂದಾಗಿ ವಿದೇಶದಿಂದ ನೇಮಕಾತಿ ದೇಶೀಯಕ್ಕಿಂತ ಹೆಚ್ಚು ದುಬಾರಿಯಾಗಲಿದೆ ಎಂದು ಎಲಾನ್​ ಮಸ್ಕ್​​ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಮಾಡಿರುವ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಉನ್ನತ ಕೌಶಲ ಹೊಂದಿರುವ ಉದ್ಯೋಗಿಗಳಿಗೆ ವಲಸೆ ವೀಸಾಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. H-1B ಪ್ರೋಗ್ರಾಂ ಉಲ್ಲೇಖಿಸಿದ ಅವರು, ನಾನು ಯಾವಾಗಲೂ ವೀಸಾಗಳನ್ನು ಇಷ್ಟಪಡುತ್ತೇನೆ. ನಾನು ಯಾವಾಗಲೂ ವೀಸಾಗಳ ಪರವಾಗಿರುತ್ತೇನೆ. ಆದ್ದರಿಂದ ನಾವು ಇದನ್ನು ಹೊಂದಿದ್ದೇವೆ. ನನ್ನ ಕಂಪನಿಗಳಲ್ಲಿ ಅನೇಕ H-1B ವೀಸಾ ಜನರಿದ್ದಾರೆ. ನಾನು H-1B ನಲ್ಲಿ ನಂಬಿಕೆಯುಳ್ಳವನಾಗಿದ್ದೇನೆ. ನಾನು ಅದನ್ನು ಹಲವು ಬಾರಿ ಬಳಸಿದ್ದೇನೆ. ಇದೊಂದು ಅತ್ಯುತ್ತಮ ಪ್ರೋಗ್ರಾಂ ಎಂದು ತಿಳಿಸಿದ್ದಾಗಿ ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವಾರ, ಮಸ್ಕ್ ಅವರು ಅಮೆರಿಕದಲ್ಲಿ ಕಡಿಮೆ ತರಬೇತಿ ಪಡೆದ ಕೆಲಸಗಾರರಿದ್ದಾರೆ ಮತ್ತು ಅಮೆರಿಕವು ಪ್ರಗತಿಯನ್ನು ಮುಂದುವರಿಸಲು ಬಯಸಿದರೆ ವಿದೇಶದಿಂದ ನುರಿತ ಕಾರ್ಮಿಕರನ್ನು ಕರೆತರುವುದು ಬಹಳ ಮುಖ್ಯ ಎಂದು ಹೇಳಿದ್ದರು. ಮಸ್ಕ್ ಅವರನ್ನು ಬೆಂಬಲಿಸಿ ಭಾರತೀಯ ಮೂಲದ ರಾಜಕಾರಣಿ ವಿವೇಕ್ ರಾಮಸ್ವಾಮಿ ಅವರು ಅಮೆರಿಕದ ಸಂಸ್ಕೃತಿಯು ಶ್ರೇಷ್ಠತೆಗೆ ಬದಲಾಗಿ ಸಾಧಾರಣತೆಗೆ ಪ್ರಾಮುಖ್ಯತೆಯನ್ನು ನೀಡಿದೆ ಎಂದು ಹೇಳಿದ್ದಾರೆ.

ಟೆಕ್ ಕಂಪನಿಗಳು ಹೆಚ್ಚಾಗಿ ವಿದೇಶಿ ಸಂಜಾತ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳುತ್ತವೆ ಎಂದು ಅವರು ಹೇಳಿದರು. ಅಮೆರಿಕದಲ್ಲಿ ಯಾವುದೇ ಬುದ್ಧಿವಂತಿಕೆಯ ಕೊರತೆಯಿದೆ ಎಂಬ ಕಾರಣಕ್ಕಾಗಿ ಅಲ್ಲ ಆದರೆ ಗಣಿತ ಒಲಿಂಪಿಯಾಡ್ ಚಾಂಪಿಯನ್‌ಗಳಿಗಿಂತ ಹೆಚ್ಚು ಆಚರಿಸುವ ಸಂಸ್ಕೃತಿಯಿಂದಾಗಿ. ಅಮೆರಿಕಕ್ಕೆ ಪ್ರಚಂಡ ಪ್ರತಿಭೆಗಳನ್ನು ತರದಿದ್ದರೆ ದೇಶವು ಚೀನಾಕ್ಕಿಂತ ಹಿಂದುಳಿದಿದೆ ಎಂದು ಅವರು ಹೇಳಿದರು.

H-1B ವೀಸಾ

H-1B ಎಂಬುದು ವಲಸಿಗರಲ್ಲದ ವೀಸಾ ಆಗಿದ್ದು, ಇದನ್ನು US ಪೌರತ್ವ ಮತ್ತು ವಲಸೆ ಸೇವೆಗಳಿಂದ ನೀಡಲಾಗುತ್ತದೆ. ಈ ವೀಸಾವನ್ನು ಸಾಮಾನ್ಯವಾಗಿ ಐಟಿ ವೃತ್ತಿಪರರು, ವಾಸ್ತುಶಿಲ್ಪ, ಆರೋಗ್ಯ ವೃತ್ತಿಪರರು ಮುಂತಾದ ನಿರ್ದಿಷ್ಟ ವೃತ್ತಿಯೊಂದಿಗೆ ಸಂಬಂಧ ಹೊಂದಿರುವ ಜನರಿಗೆ ನೀಡಲಾಗುತ್ತದೆ. H1B ವೀಸಾ ಪಡೆದ ಜನರಿಗೆ ಮಾತ್ರ ಅಮೆರಿಕದಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡಲು ಅವಕಾಶವಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net