ಮಾರ್ಕ್​ ಜುಕರ್​ಬರ್ಗ್​​​​ ಸೆಲೆಬ್ರೇಷನ್​ ವೀಡಿಯೊ ನೋಡಿ ಛೇಡಿಸಿದ ಎಲಾನ್​​ ಮಸ್ಕ್​!

Untitled-design-2024-07-06T185445.437
Published on

ವಾಷಿಂಗ್ಟನ್ ಡಿಸಿ: ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ 248ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿರುವ ವೀಡಿಯೊವೊಂದನ್ನು ಮಾರ್ಕ್ ಜುಕರ್‌ಬರ್ಗ್ ಜುಲೈ 4ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಮಾರ್ಕ್​ ಜುಕರ್​ಬರ್ಗ್​​​​ ಅವರು ಒಂದು ಕೈಯಲ್ಲಿ ಅಮೇರಿಕಾದ ಧ್ವಜವನ್ನು ಮತ್ತು ಇನ್ನೊಂದು ಕೈಯಲ್ಲಿ ಬಿಯರ್ ಕ್ಯಾನ್ ಅನ್ನು ಹಿಡಿದುಕೊಂಡು ಬಿಯರ್ ಕುಡಿಯುತ್ತಾ ಸರ್ಫಿಂಗ್ ಮಾಡುತ್ತಿರುವ ಕ್ಲಿಪ್​ ಇದೆ. ಈ ವೀಡಿಯೋ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಮಾರ್ಕ್​​ ಜುಕರ್​ಬರ್ಗ್​ ಅವರ ಈ ಹೊಸ ಅವತಾರ ನೋಡಿ ನೆಟ್ಟಿಗರು ಶಾಕ್​​​​​ ಆಗಿದ್ದು, ಕೆಲವರು ಅವರ ಪರವಾಗಿ ಹಾಗೂ ಮತ್ತೆ ಕೆಲವರು ವಿರುದ್ಧವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಮಾರ್ಕ್​ ಅವರ ಈ ಪೋಸ್ಟ್​​ಗೆ ಎಲೋನ್​​ ಮಸ್ಕ್​ ಕೂಡ ಕಾಮೆಂಟ್ ಮಾಡಿದ್ದಾರೆ. ಸದಾ ಒಂದಲ್ಲಾ ಒಂದು ಹೊಸ ಹೇಳಿಕೆಗಳನ್ನು ನೀಡಿ ಮಸ್ಕ್​​ಸುದ್ದಿಯಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ.

ಈಗ ಅಮೆರಿಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಿರುವ ಮಾರ್ಕ್​​​ ಜುಕರ್​ಬರ್ಗ್​​ ಅವರ ವೀಡಿಯೊವನ್ನು ಫೇಸ್​ಬುಕ್​ ಮತ್ತು ಇನ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡು ತಮ್ಮ ಪ್ರತಿಕ್ರಿಯೆಯನ್ನು ಎಕ್ಸ್​ನಲ್ಲಿ ನೀಡಿದ್ದಾರೆ. ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಸರ್ಫಿಂಗ್ ಮಾಡುವಾಗ ಅವರು ಮೋಜನ್ನು ಮುಂದುವರಿಸಬಹುದು ಆದರೆ ನನ್ನ ಮೊದಲ ಆದ್ಯತೆ ಕೆಲಸಕ್ಕೆ, ಆದ್ದರಿಂದ ನಾನು ಕೆಲಸ ಮಾಡಲು ಬಯಸುತ್ತೇನೆ ಎಂದು ಪೋಸ್ಟ್​​ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಮಾರ್ಕ್​ ಜುಕರ್​ಬರ್ಗ್​ ಅವರು ತಮ್ಮ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವಾಗ, ಹ್ಯಾಪಿ ಬರ್ತ್‌ಡೇ ಅಮೇರಿಕಾ! ಎಂದು ಬರೆದುಕೊಂಡಿದ್ದಾರೆ. 32 ಸೆಕೆಂಡ್‌ನ ಈ ವಿಡಿಯೋ ಇದುವರೆಗೆ ಎಂಟೂವರೆ ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಇದ್ದರಿಂದಲೇ ನೆಟಿಜನ್‌ಗಳು ಜುಕರ್‌ಬರ್ಗ್ ಅವರ ವೀಡಿಯೊವನ್ನು ತುಂಬಾ ಇಷ್ಟಪಡುತ್ತಿದ್ದಾರೆ ಎಂದು ಇದು ತಿಳಿಯುತ್ತದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net