75ರಲ್ಲೂ ಸಿಕ್ಕಾಪಟ್ಟೆ ಫಿಟ್ ಆಗಿರುವ ಎಲಾನ್ ಮಸ್ಕ್ ತಾಯಿ ಇಂದಿಗೂ ಮಾಡೆಲಿಂಗ್‌ ಮಾಡ್ತಾರಂತೆ!

Musk
Published on

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಆಗಾಗ ತನ್ನ ತಾಯಿಯೊಂದಿಗೆ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ನಾವೆಲ್ಲ ಸಾಮಾನ್ಯವಾಗಿ ನೋಡಿರುತ್ತೇವೆ. ಅವರ ತಾಯಿಯ ಹೆಸರು ಮಾಯೆ ಮಸ್ಕ್‌. ಆಕೆಗೆ 75 ವರ್ಷ. ತುಂಬಾ ಸುಂದರಿ. ಫ್ಯಾಷನ್ ವಿಚಾರದಲ್ಲೂ ಯಾರಿಗಿಂತ ಕಡಿಮೆಯಿಲ್ಲ. ಮಾಯೆ ಮಸ್ಕ್‌ ವೃತ್ತಿಯಲ್ಲಿ ಮಾಡೆಲ್, ಪೌಷ್ಠಿಕ ಆಹಾರ ತಜ್ಱರು. ಅವರು ಆರೋಗ್ಯ ಸೇರಿದಂತೆ ಸಾಹಸ, ಸೌಂದರ್ಯ, ಯಶಸ್ಸಿನ ಕುರಿತೂ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್ ಈಜುಡುಗೆ ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿಕೊಂಡ ವಿಶ್ವದ ಅತ್ಯಂತ ಹಿರಿಯ ಮಹಿಳೆಯೂ ಹೌದು. ಜನರು ಅವರ ಲುಕ್ ನೋಡಿ ಪ್ರಶಂಸೆ ವ್ಯಕ್ತಪಡಿಸುತ್ತಿರುತ್ತಾರೆ. ಯಾರಾದರೂ ಮಹಿಳೆಯರ ಕುರಿತು ವಯಸ್ಸಾಯಿತೆಂದೂ ಪ್ರತಿಕ್ರಿಯಿಸುತ್ತಿದ್ದರೆ ಯಾವಾಗಲೂ ಅವರ ವಿರುದ್ಧ ನಿಲ್ಲುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿರುವ ಇವರು ಎಕ್ಸ್ ಹಾಗೂ ಇನ್ಸ್ಟಾಗ್ರಾಂನಲ್ಲಿ ತಮ್ಮ ಫೋಟೋಗಳನ್ನು ಶೇರ್​​ ಮಾಡುತ್ತಿರುತ್ತಾರೆ. ಮಾಯೆ ಮಸ್ಕ್‌ ತಮ್ಮ 15 ನೇ ವರ್ಷದಿಂದ ಮಾಡೆಲಿಂಗ್ ಮಾಡುತ್ತಿದ್ದಾರೆ. ಇವರು ಏ.19, 1948ರಂದು ಕೆನಾಡದಲ್ಲಿ ಜನಿಸಿದರು. ಆದರೆ ಬಾಲ್ಯದಲ್ಲಿಯೇ ದ.ಆಫ್ರಿಕಾಕ್ಕೆ ಬಂದರು.

ವ್ಯಾನಿಟಿ ಫೇರ್ ನಿಯತಕಾಲಿಕೆಯ ಪ್ರಕಾರ, ಮೇ 1960ರಲ್ಲಿ ಮಿಸ್​​ ಸೌತ್ ಆಫ್ರಿಕಾ ಸ್ಪರ್ಧೆಯಲ್ಲಿ ಫೈನಲಿಸ್ಟ್ ಆಗಿದ್ದರು. ಅವರು ಮಾಡೆಲಿಂಗ್​​​ನ ತಮ್ಮ ಹಳೆಯ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. 1970ರ ಫೋಟೋಶೂಟ್​​ನ ಫೋಟೋಗಳನ್ನು ಡಿಸೆಂಬರ್​​​ 2022ರಲ್ಲಿ ಹಂಚಿಕೊಂಡಿದ್ದನ್ನು ನೀವು ನೆನಪಿಸಿಕೊಳ್ಳಬಹುದು. ಅವರಿಗೆ ಗ್ರೇ ಹೇರ್​ ಎಂದರೆ ಬಹಳ ಇಷ್ಟ. ಹೆಚ್ಚುತ್ತಿರುವ ವಯಸ್ಸನ್ನು ಮರೆಮಾಚುವ ಅಗತ್ಯವಿಲ್ಲ ಎಂಬುದು ಅವರ ಅನಿಸಿಕೆ. ಅವರು ಪ್ರಪಂಚದಾದ್ಯಂತ ಓಡಾಡಿದಾಗಲೂ ಜನ ಅವರಿಗೆ ಇದೇ ಕಾರಣಕ್ಕೆ ಪ್ರಶಂಸಿದ್ದು ಉಂಟೂ.

ವಿಚ್ಚೇಧನದ ನಂತರ ಮಕ್ಕಳೊಂದಿಗೆ ಕೆನಾಡಕ್ಕೆ ಬಂದ ಅವರು ಫ್ಯಾಷನ್​​ಗೆ ಸಂಬಂಧಿಸಿದ ಅನೇಕ ಬ್ರಾಂಡ್​​ಗಳಲ್ಲಿ ಕಾಣಿಸಿಕೊಂಡಿದ್ದಾರೆ. 18 ನೇ ವಯಸ್ಸಿನಲ್ಲಿ ಕಂಡ ಕನಸುಗಳು 70 ನೇ ವಯಸ್ಸಿನಲ್ಲಿ ನನಸಾಗಿದ್ದಕ್ಕೆ ಸಂತೋಷ ಕೂಡ ವ್ಯಕ್ತಪಡಿಸಿದ್ದಾರೆ.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net