

ನವದೆಹಲಿ: ಟರ್ಕಿಷ್ ಏರ್ಲೈನ್ಸ್ನ ಮಾಜಿ ಚೇರ್ಪರ್ಸನ್ ಎಲ್ಕರ್ ಐಸಿ ಅವರನ್ನು ಏರ್ ಇಂಡಿಯಾದ ನೂತನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್, ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕ ಮಾಡಿರುವುದಾಗಿ ಟಾಟಾ ಸನ್ಸ್ ಸೋಮವಾರ ತಿಳಿಸಿದೆ.
ಎಲ್ಕರ್ ಐಸಿ ಅವರು ಟರ್ಕಿಷ್ ಏರ್ಲೈನ್ಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದ ಏವಿಯಷನ್ ಇಂಡಸ್ಟ್ರಿಯ ಪರಿಣತ. ಅವರ ನೇಮಕಾತಿಯೊಂದಿಗೆ ಏರ್ ಇಂಡಿಯಾ ಹೊಸ ಯುಗಕ್ಕೆ ಪ್ರವೇಶಿಸಲಿದೆ ಎಂದು ಟಾಟಾ ಸನ್ಸ್ ಚೇರ್ವುನ್ ಎನ್.ಚಂದ್ರಶೇಖರನ್ ಹೇಳಿದರು. ಎಲ್ಕರ್ ಐಸಿ ಈ ವರ್ಷ ಏಪ್ರಿಲ್ 1 ಅಥವಾ ಅದಕ್ಕೂ ಮೊದಲೆ ಪದಗ್ರಹಣ ಮಾಡಲಿದ್ದಾರೆ ಎಂದು ಟಾಟಾ ಸನ್ಸ್ ತಿಳಿಸಿದೆ.
ಟಾಟಾ ಗ್ರೂಪ್ ಸೇರಲು ಮತ್ತು ಐಕಾನಿಕ್ ಏರ್ಲೈನ್ ಅನ್ನು ಮುನ್ನಡೆಸಲು ಅವಕಾಶ ಸಿಕ್ಕಿರುವುದು ಒಂದು ಗೌರವ ಮತ್ತು ಸಂತೋಷದ ವಿಚಾರ ಎಂದು ಎಲ್ಕರ್ ಐಸಿ ಹೇಳಿದರು.