ಆಗುಂಬೆಯಲ್ಲಿ ಆನೆ ಮತ್ತೆ ಪ್ರತ್ಯಕ್ಷ

ELEPHANT
ಆಗುಂಬೆ ಭಾಗದಲ್ಲಿ ಓಡಾಡುತ್ತಿರುವ ಕಾಡಾನೆ.
Published on

ತೀರ್ಥಹಳ್ಳಿ: ಹತ್ತಾರು ವರ್ಷಗಳಿಂದ ಆಗುಂಬೆ ಭಾಗದಲ್ಲಿಯೇ ಟಿಕಾಣಿ ಹೂಡಿರುವ ಕಾಡಾನೆ ಕಳೆದ ಒಂದು ವಾರದಿಂದ ಮತ್ತೆ ಮಲ್ಲಂದೂರಿನಲ್ಲಿ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಭಾನುವಾರ ರಾತ್ರಿ ಗ್ರಾಮದ ದೇವಸ್ಥಾನದ ಬಳಿ ಓಡಾಡಿರುವ ಆನೆ ನಂತರ ಕಮಲಮ್ಮ ಎಂಬುವವರ ಮನೆ ಸಮೀಪದಲ್ಲೇ ಹಾದು ಹೋಗಿದೆ. ಕೆಲವು ತಿಂಗಳುಗಳಿಂದ ಸುಳಿವೇ ಇಲ್ಲದ ಆನೆ ಒಂದು ವಾರದ ಹಿಂದೆ ಮಲ್ಲಂದೂರಿನ ಒಬ್ಬ ರೈತರ ತೋಟದಲ್ಲಿ ಮೊದಲು ಕಾಣಿಸಿಕೊಂಡಿದೆ. ಜನವಸತಿ ಪ್ರದೇಶದಲ್ಲೇ ಆನೆ ಸಂಚರಿಸುತ್ತಿರುವ ಕಾರಣ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net