VIDEO| ಮನೆಗೆ ಇನ್ನೇನು ನುಗ್ಗಿಬಿಡ್ತು ಅಂದುಕೊಂಡಿದ್ದ ಆನೆ ಮುಂದೆ ಎಲ್ಲಿಗೆ ನಡೆಯಿತು?

elephant assam
Published on

ಅಸ್ಸಾಂ: ಅರಣ್ಯದ ಅಂಚಿನಲ್ಲಿರುವ ಮನೆ ದ್ವಾರದ ಬಳಿಗೆ ನಡೆಯುತ್ತಿರುವ ಆನೆ ನೋಡಿದರೆ ಅದು ಮನೆಗೆ ನುಗ್ಗಿ ದಾಳಿ ನಡೆಸುತ್ತದೆ ಎಂಬುದು ಎಂತವರಿಗೂ ತಿಳಿಯುತ್ತದೆ.

ಆನೆ ಇನ್ನೇನು ಮನೆ ಬಾಗಿಲು ಧ್ವಂಸ ಮಾಡಿ ನುಗ್ಗಿ ಬಿಡುತ್ತದೆ ಅಂದುಕೊಂಡು ಉಸಿರು ಬಿಗಿ ಹಿಡಿದು ವಿಡಿಯೋ ನೋಡುತ್ತಿದ್ದರೆ ತಕ್ಷಣವೇ ಕೊಂಚ ನಿರಾಳವಾಗುತ್ತದೆ.

ಮನೆಗೆ ನೇರವಾಗಿ ಪ್ರವೇಶ ಮಾಡುವಂತೆ ನಡೆದ ಆನೆ ಬಾಗಿಲು ಬಳಿಗೆ ತೆರಳುತ್ತಿದ್ದಂತೆ ತಿರುವು ಪಡೆದುಕೊಂಡು ಸೌಮ್ಯವಾಗಿ ಮತ್ತೆ ಹಿಂದಕ್ಕೆ ಬರುತ್ತದೆ.

ಆನೆಯ ಚಲನೆಯ ಈ ದೃಶ್ಯವನ್ನು ಭಾರತೀಯ ಅರಣ್ಯ ಸೇವೆ ಇಲಾಖೆ ಅಧಿಕಾರಿ ಸುಧಾ ರಾಮನ್​ ಅವರು ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ.

ಆನೆ ಯಾವುದೇ ಹಾನಿ ಮಾಡದೆ ಮನೆಯನ್ನು ಸುತ್ತು ಹಾಕಿಕೊಂಡು ಶಾಂತಿಯುತವಾಗಿ ತೆರಳಿದೆ ಎಂದು ಅವರು ಶೀರ್ಷಿಕೆ ಬರೆದು ವಿಡಿಯೋ ಅಪ್​ಲೋಡ್​ ಮಾಡಿದ್ದಾರೆ.

ಈ ವಿಡಿಯೋವನ್ನು ಹಲವು ಮಂದಿ ಫೇಸ್​ಬುಕ್​ ಹಾಗೂ ಇತರ ಜಾಲತಾಣಗಳಿಗೆ ಮರು ಹಂಚಿಕೆ ಮಾಡಿದ್ದಾರೆ.
ವಿಡಿಯೋ ನೋಡಿದ ಕೆಲವರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net