

ತೀರ್ಥಹಳ್ಳಿ: ಹಲವು ವರ್ಷಗಳಿಂದ ಆಗುಂಬೆ ಪರಿಸರದಲ್ಲೇ ಠಿಕಾಣಿ ಹೂಡಿರುವ ಕಾಡಾನೆ ಜನವಸತಿ ಪ್ರದೇಶದಲ್ಲಿ ಸಂಚರಿಸುತ್ತಿರುವುದು ವಾಹನ ಸಂಚಾರ ಮತ್ತು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಕಾಡಾನೆಯಿಂದ ಈವರೆಗೆ ಯಾವುದೇ ಅಪಾಯ ಉಂಟಾಗದಿದ್ದರೂ ಜನವಸತಿ ಪ್ರದೇಶದಲ್ಲೇ ನಿರಾತಂಕವಾಗಿ ಸಂಚರಿಸುತ್ತಿರುವುದರಿಂದ ಜನರು ಭಯಗೊಂಡಿದ್ದಾರೆ. ಮೊದ ಮೊದಲು ರಾತ್ರಿ ಹೊತ್ತಿನಲ್ಲಿ ಹೆದ್ದಾರಿ ದಾಟಿ ಓಡಾಡುತ್ತಿದ್ದ ಆನೆ ಇತ್ತೀಚೆಗೆ ಹಗಲಿನಲ್ಲಿಯೇ ಪಟ್ಟಣದ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಹಗಲಿನಲ್ಲಿಯೇ ಆಗುಂಬೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವಾಹನಗಳ ಸದ್ದಿಗೂ ಕ್ಯಾರೇ ಎನ್ನದೆ ಆನೆ ಸಂಚರಿಸುತ್ತಿದೆ.