ಆನೆ ದಾಳಿಯಿಂದಾಗಿ ಅರವಳಿಕೆ ತಜ್ಞರಿಗೆ ಗಂಭೀರ ಗಾಯ!

elephant
Published on

ದಾವಣಗೆರೆ: ಆನೆ ದಾಳಿಯಿಂದಾಗಿ ಅರವಳಿಕೆ ತಜ್ಞ ಡಾ. ವಿನಯ ಅವರಿಗೆ ಗಂಭೀರ ಗಾಯಗೊಂಡಿದ್ದಾರೆ.

ಅರವಳಿಕೆ ತಜ್ಞರ ಮೇಲೆ ಆನೆ ದಾಳಿ ಮಾಡಿದ್ಯಾಕೆ?

ಬೆಳಗ್ಗೆ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಹನುಮಾಪುರ ಕೆರೆ ಬಳಿ ಆನೆ ಕಾಣಿಸಿಕೊಂಡಿತ್ತು. ಅದನ್ನು ಹಿಡಿಯುವ ಕಾರ್ಯಾಚರಣೆ ಭಾಗವಾಗಿ ಶಿವಮೊಗ್ಗ ಜಿಲ್ಲೆ ಸಕ್ರೆಬೈಲಿನಿಂದ ಅರವಳಿಕೆ ತಜ್ಞ ಡಾ.ವಿನಯ್ ಅವರನ್ನು ಕರೆಸಲಾಗಿತ್ತು.

ಕಾರ್ಯಾಚರಣೆ ವೇಳೆ ಅರವಳಿಕೆ ಮದ್ದು ನೀಡುವ ಪ್ರಯತ್ನದಲ್ಲಿದ್ದಾಗ ಆನೆಯು ದಾಳಿ ಮಾಡಿದೆ. ಅದರಿಂದ ತಪ್ಪಿಸಿಕೊಳ್ಳು ಸಂದರ್ಭದಲ್ಲಿ ಡಾ. ವಿನಯ್ ಮುಗ್ಗರಿಸಿ ಬಿದ್ದಿದ್ದು, ಆಗ ಅವರ ಮೇಲೆ ಆನೆಯು ಕಾಲಿಟ್ಟಿದೆ. ಗಂಭೀರವಾಗಿ ಗಾಯಗೊಂಡ ಡಾ.ವಿನಯ್ ಅವರನ್ನು ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಈ ಆನೆಯನ್ನು ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದ ಹನುಮಾಪುರ ಗಡಿ ಜಾಲಿ ಹೊಸೂರ್ ಕೆರೆಯ ಬಳಿ ಸೆರೆ ಹಿಡಿಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net