ಹದ್ದಿನ ಕಳೇಬರದಲ್ಲಿ ಎಲೆಕ್ಟ್ರಾನಿಕ್ ಸಾಧನ !; ಶುರುವಾಗಿದೆ ತನಿಖೆ

Haddu 26 april 20
Published on

ವಿಜಯಪುರ: ಬಸವನಬಾಗೇವಾಡಿ ತಾಲೂಕು ಯಂಬತ್ನಾಳ ಗ್ರಾಮದ ಬಳಿಯ ಹೊಲವೊಂದರಲ್ಲಿ ಹದ್ದಿನ ಕಳೇಬರ ಭಾನುವಾರ ಪತ್ತೆಯಾಗಿದ್ದು, ಅದರ ಕಾಲಿಗೆ ಕೋಳ, ದೇಹದ ಮೇಲೆ ಅತ್ಯಾಧುನಿಕ ಸೆನ್ಸರ್ ಮಾದರಿಯ ಸಾಧನ ಅಳವಡಿಸಿರುವುದು ಆತಂಕಕ್ಕೆ ಕಾರಣವಾಗಿದೆ.

ಸ್ಥಳಕ್ಕೆ ಆಗಮಿಸಿದ ಮುದ್ದೇಬಿಹಾಳ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ ನೇತೃತ್ವದ ತಂಡ ಕಳೇಬರವನ್ನು ಬಸವನಬಾಗೇವಾಡಿಯ ಪಶುಸಂಗೋಪನಾ ಇಲಾಖೆಗೆ ಸಾಗಿಸಿದೆೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ವೈಜ್ಞಾನಿಕ ಸಂಶೋಧನೆಗಾಗಿ ಹದ್ದಿಗೆ ಕೋಳ ಹಾಗೂ ಎಲೆಕ್ಟ್ರಾನಿಕ್ ಸಾಧನ ಅಳವಡಿಸಿ ಹಾರಿ ಬಿಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅದು ಎಲ್ಲಿಂದ ಬಂತು ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಸೋಮವಾರ ತಿಳಿಯಲಿದೆ ಎಂದು ಬಸನಗೌಡ ಬಿರಾದಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net