ವಿದ್ಯುತ್​ ತಂತಿ ತಗುಲಿ ಕುರಿಗಾಹಿ ಸಾವು

Crime Logo
Published on

ಹಾವೇರಿ: ಅಡವಿ ಪ್ರದೇಶದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ಕುರಿಗಾಹಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ನೆಗಳೂರು ಗ್ರಾಮದ ಬಳಿ ಗುರುವಾರ ಸಂಭವಿಸಿದೆ.

ಸವಣೂರ ತಾಲೂಕಿನ ಕುರಬರಮಲ್ಲೂರ ಗ್ರಾಮದ ಫಕ್ಕೀರೇಶ ತಿಪ್ಪಣ್ಣ ಜಕ್ಕಣ್ಣನವರ (42) ಮೃತ ಕುರಿಗಾಹಿ.

ಇವರು ಕುರಿ ಮೇಯಿಸುತ್ತಿದ್ದ ಸಮಯದಲ್ಲಿ ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ತೆರಳುತ್ತಿದ್ದ ಸಮಯದಲ್ಲಿ ವಿದ್ಯುತ್​ ತಂತಿ ಕಟ್ಟಾಗಿ ಬದ್ದಿದೆ. ಇದನ್ನು ಅರಿಯದ ಫಕ್ಕೀರೇಶ ಅದರ ಮೇಲೆ ಕಾಲಿಟ್ಟಿದ್ದರಿಂದ ವಿದ್ಯುತ್​ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗುತ್ತಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net