ಆಶ್ರಯಮನೆಗೆ ವಿದ್ಯುತ್​ ಸಂಪರ್ಕ ನೀಡಲು ಹಣದ ಬೇಡಿಕೆ ಇಟ್ಟಿದ್ದ ಗುತ್ತಿಗೆದಾರ; ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ

Guttigedaara 24 jan 20
Published on

ಗದಗ: ಲಂಚ ಪಡೆಯುತ್ತಿದ್ದ ವಿದ್ಯುತ್​ ಗುತ್ತಿಗೆದಾರನ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮುಂಡರಗಿ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ವಿದ್ಯುತ್​ ಗುತ್ತಿಗೆದಾರ ಹನುಮಂತಪ್ಪ ಹೊನ್ನಳ್ಳಿ ಲಕ್ಷ್ಮವ್ವ ಪೂಜಾರ ಎಂಬುವರಿಂದ 7 ಸಾವಿರ ರೂ.ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಹೈತಾಪುರ ಗ್ರಾಮದ ಲಕ್ಷ್ಮವ್ವ ಅವರ ಆಶ್ರಯ ಮನೆಗೆ ವಿದ್ಯುತ್​ ಸಂಪರ್ಕ ಕಲ್ಪಿಸಿಕೊಡಲು ಗುತ್ತಿಗೆದಾರ 12 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಲಕ್ಷ್ಮವ್ವ ಸಂಬಂಧಿ ಮುತ್ತಪ್ಪ ಹಿರೇಹಾಳ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಅನ್ವಯ ಡಿವೈಎಸ್​ಪಿ ವಾಸುದೇವ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net