

ಬೇಲೂರು: ಪಟ್ಟಣದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಬೇಲೂರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಯಾವುದೇ ರಾಜಕೀಯ ಪಕ್ಷಗಳಿಗಿಂತ ಕಮ್ಮಿ ಇಲ್ಲದಂತೆ ತೀವ್ರವಾದ ಹಣಾಹಣಿಯಿಂದ ಕೂಡಿದ್ದು ಮಾ.25 ರಂದು ನಡೆಯುವ ಚುನಾವಣೆಯಲ್ಲಿ ಕುತೂಹಲಕ್ಕೆ ತೆರೆ ಬೀಳಲಿದೆ.
ಬೇಲೂರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಬಾರಿ ಬಿರುಸುಗೊಂಡಿದ್ದು ಚುನಾವಣೆಯಲ್ಲಿ ಎರಡು ಬಣಗಳಿದ್ದು ಒಂದು ಬಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೇಂಟ್ ರವಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೊರಟಕೆರೆ ಸತೀಶ್ ಹೆಸರು ಕೇಳಿ ಬರುತ್ತಿದ್ದು, ಇನ್ನೊಂದು ಬಣದವರು ನಿರ್ದೇಶಕರನ್ನು ಸೆಳೆಯುವ ಪ್ರಯತ್ನದಲ್ಲಿದ್ದು ಚುನಾವಣೆಯಲ್ಲಿ ಚನ್ನಕೇಶವಸ್ವಾಮಿ ಯಾರಿಗೆ ಆರ್ಶಿರ್ವಾದ ಮಾಡುತ್ತಾನೆ ಎಂಬುದನ್ನು ಕಾದು ಮೋಡಬೇಕಿದೆ.
ಜತೆಗೆ ಬೇಲೂರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಪ್ರಮುಖವಾಗಿದ್ದು 2025ರಿಂದ 2030 ರ ವರೆಗಿನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಮಾ.16 ರಂದು ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಪೇಂಟ್ ರವಿ, ಬಲರಾಮೇಗೌಡ, ಬಿ.ಎಂ ಪ್ರಸನ್ನ, ಚಂದ್ರಶೇಖರ್, ತಾರಾನಾಥ್, ಸತೀಶ್, ಬಿ.ಬಿ.ಶಿವರಾಜ್, ಎಸ್.ಕೆ.ನಾಗೇಶ್, ಸ್ವಾಮೀಗೌಡ, ಬಿ.ಎಸ್.ಶೀಲಾ, ಕೆ.ಟಿ.ರಶ್ಮಿತಾ, ಲಕ್ಷ್ಮಣ್, ವಿಜಯಕುಮಾರ್ ಆಯ್ಕೆಯಾಗಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ತಮ್ಮ ಬಣದಲ್ಲಿಯೇ ಉಳಿಸಿಕೊಳ್ಳಬೇಕೆಂದು ಎರಡೂ ಬಣಗಳು ಇನ್ನಿಲ್ಲದಂತೆ ಕಸರತ್ತು ನಡೆಸುತ್ತಿವೆ.
ಮತ್ತೊಂದು ಬಣದಲ್ಲಿ ಬಲರಾಮೇಗೌಡ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಉಳಿದಂತೆ ಐದು ವರ್ಷಗಳಲ್ಲಿ ಉಳಿದ ನಿರ್ದೇಶಕರಿಗೆ ಅಧಿಕಾರ ಹಂಚಿಕೆ ಮಾಡುವುದು ಎನ್ನಲಾಗಿತ್ತು. ಆದರೆ ಕಳೆದ ಭಾನುವಾರ ರಾತ್ರಿ ನಡೆದ ಬೆಳವಣಿಗೆಯಲ್ಲಿ ಪೇಂಟ್ ರವಿ ಮತ್ತು ಸತೀಶ್ ಇವರನ್ನು ಇನ್ನೊಂದು ತಂಡ ಸೆಳೆಯುವ ಮೂಲಕ ತಮ್ಮ ತಂಡದಲ್ಲಿ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದು, ಸದ್ಯ ಈಗ ಪೇಂಟ್ ರವಿ, ಬಿ.ಬಿ.ಶಿವರಾಜ್, ಎಂ.ಪಿ.ತಾರಾನಾಥ್, ಎಸ್.ಕೆ.ನಾಗೇಶ್, ಲಕ್ಷ್ಮಣ್, ಬಿ.ವಿ.ಸತೀಶ್, ಬಿ.ಎಂ.ಪ್ರಸನ್ನ 7 ಜನರು ಸೇರಿ ಬಹುತೇಕ ಪೇಂಟ್ ರವಿಯನ್ನು ಅಧ್ಯಕ್ಷರನ್ನಾಗಿ ಬಿ.ವಿ.ಸತೀಶ್‌ರನ್ನು ಉಪಾಧ್ಯಕ್ಷರನ್ನಾಗಿಸುವ ಎಲ್ಲ ಸೂಚನೆಗಳು ಗೋಚರಿಸುತ್ತಿವೆ.
ಇದೇ ಪ್ರಥಮ ಬಾರಿಗೆ ಬೇಲೂರು ಅರ್ಬನ್ ಕೋ-ಆಪರೇಟಿವ್ ಸಹಕಾರ ಬ್ಯಾಂಕಿಗೆ ಐವರು ಪತ್ರಕರ್ತರು ಅಯ್ಕೆಯಾಗಿದ್ದು ಪಟ್ಟಣದಲ್ಲಿ ತೀವ್ರ ಚೆರ್ಚೆಗೆ ಗ್ರಾಸವಾಗಿತ್ತು. ಬಹುತೇಕ ಪತ್ರಕರ್ತರ ಸದಸ್ಯರೇ ಅರ್ಬನ್ ಬ್ಯಾಂಕ್ ಅಧ್ಯಕ್ಷರಾಗುತ್ತಾರೆ ಎಂಬ ಚೆರ್ಚೆಗೆ ಇಂಬು ನೀಡುತಿದ್ದು ಅರ್ಬನ್ ಬ್ಯಾಂಕ್ ಇತಿಹಾಸದಲ್ಲಿಯೇ ಪತ್ರಕರ್ತರು ಅಧ್ಯಕ್ಷರಾಗುತ್ತಿರುವುದು ಇದೇ ಪ್ರಥಮ ಎನ್ನಲಾಗಿದೆ. ಒಟ್ಟಾರೆ ಪಟ್ಟಣದ ಪ್ರತಿಷ್ಠಿತ ಬ್ಯಾಂಕ್ ಎಂದೇ ಹೆಸರಾದ ಅರ್ಬನ್ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.