ಹಾಲು ಉತ್ಪಾದಕರ ಮಹಿಳಾ ಸಂಘಕ್ಕೆ ಆಯ್ಕೆ

18KMD-1
ಗುರುದೇವರಹಳ್ಳಿ ಕಾಲನಿ (ಜಿ. ಮಾದೇಗೌಡ ನಗರ) ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 11 ಸ್ಥಾನ ಗಳಿಸಲು ಕಾರಣರಾದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರನ್ನು ನಿರ್ದೇಶಕರು ಅಭಿನಂಧಿಸಿದರು.
Published on

ಕೆ.ಎಂ.ದೊಡ್ಡಿ: ಇಲ್ಲಿಗೆ ಸಮೀಪದ ಗುರುದೇವರಹಳ್ಳಿ ಕಾಲನಿ(ಜಿ. ಮಾದೇಗೌಡ ನಗರ) ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 11 ಸ್ಥಾನವನ್ನು ಪಡೆದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ ಬೆಂಬಲಿಗರು ಆಯ್ಕೆಗೊಂಡಿದ್ದಾರೆ.

ಚುನಾವಣೆಯಲ್ಲಿ ಆಯ್ಕೆಗೊಂಡ 11 ಮಹಿಳಾ ನಿರ್ದೇಶಕರು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರನ್ನು ಕೆ.ಎಂ.ದೊಡ್ಡಿಯ ಭಾರತೀ ವಿದ್ಯಾಸಂಸ್ಥೆಯ ಆಡಳಿತ ಕಚೇರಿಯಲ್ಲಿ ಅಭಿನಂದಿಸಿ, ಗೌರವಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಹೈನು ಉದ್ಯಮ ಮಹಿಳೆಯರನ್ನು ಆರ್ಥಿಕ ಸಬಲರನ್ನಾಗಿ ಮಾಡುತ್ತಿದೆ. ರಾಜ್ಯ ಸರ್ಕಾರ ಕೂಡ ಹಾಲಿನ ದರ ಏರಿಕೆ ಮಾಡುವ ಮೂಲಕ ಹೈನು ಉದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘ ಅಭಿವೃದ್ಧಿಯಾಗಲು ಎಲ್ಲ ನಿರ್ದೇಶಕರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ಡೇರಿಗಳು ಆರ್ಥೀಕವಾಗಿ ಅಭಿವೃದ್ಧಿಯಾಗಿ ಷೇರಿದಾರರಿಗೆ ಹೆಚ್ಚಿನ ಲಾಭ ನೀಡಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ತಾಪಂ ಮಾಜಿ ಸದಸ್ಯ ಭರತೇಶ್, ಗ್ರಾಪಂ ಮಾಜಿ ಸದಸ್ಯ ಪುಟ್ಟೇಗೌಡ, ಮುಖಂಡರಾದ ಬೋರೇಗೌಡ, ಕೃಷ್ಣ, ಪಾಪಣ್ಣ, ರಾಜು, ಗಿರಿಸ್ವಾಮಿ, ಮಧು, ಮಾದೇಗೌಡ, ನಿಂಗೇಗೌಡ, ನಿರ್ದೇಶಕರಾದ ರಶ್ಮಿ ಮಧು, ನಂದಿನಿ, ಚಿಕ್ಕಬೋರಮ್ಮ, ಪವಿತ್ರಾ, ನಿಂಗಮ್ಮ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net