ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಆಯ್ಕೆ

13.Pyp. 001.
ಪಿರಿಯಾಪಟ್ಟಣ ತಾಲೂಕು ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದವರನ್ನು ಸದಸ್ಯರು ಅಭಿನಂದಿಸಿದರು. ಎಚ್.ಜೆ.ವರದೇಶ್. ಕೆ.ಟಿ.ಕೈಲಾಸಪತಿ. ಎಚ್.ಬಸವರಾಜ್, ಪಿ.ಎನ್.ರವಿಕುಮಾರ್, ಆರ್.ರಮೇಶ್, ಎಚ್.ಪಿ.ಉದಯ, ಟಿ.ಚಿಕ್ಕೇಗೌಡ, ಪಿ.ಲೋಕೇಶ್, ವಿ.ಎನ್.ಸರ್ವಮಂಗಳಾ, ಪಿ.ಚೈತ್ರಾ. ಸಿ.ಕೆ.ಗಣೇಶ್, ಗಿರೀಶ್, ಸಂದೇಶ್, ಸಿ.ಮಂಜುನಾಥ್, ಆರ್.ಭವಾನಿ, ರಾಮಚಂದ್ರ, ಪ್ರಶಾಂತ್, ಸುರೇಶ್, ನಟರಾಜ್, ರಘು ಇತರರು ಇದ್ದರು.
Published on

ಪಿರಿಯಾಪಟ್ಟಣ: ತಾಲೂಕು ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರ ಸಂಘದ 15 ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಸಲಾಯಿತು.

ಪಟ್ಟಣದ ಬಾಲಕರ ಪೇಟೆ ಸರ್ಕಾರಿ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ 15 ನಿರ್ದೇಶಕ ಸ್ಥಾನಗಳಲ್ಲಿ 4 ಸ್ಥಾನಗಳಿಗೆ ಕಂದಾಯ ಇಲಾಖೆಯ ಗಿರೀಶ್, ತಾಲೂಕು ಪಂಚಾಯತ್ ರಾಜ್ ಇಲಾಖೆಯ ಸಂದೇಶ್, ಶಿಕ್ಷಣ ಇಲಾಖೆಯಿಂದ ಪರಿಶಿಷ್ಟ ವಿಭಾಗದಿಂದ ಸಿ.ಮಂಜುನಾಥ್ ಮತ್ತು ಹಿಂದುಳಿದ ವರ್ಗ ಬಿ ಕ್ಷೇತ್ರದಿಂದ ಆರ್.ಭವಾನಿ ಅವಿರೋಧವಾಗಿ ಆಯ್ಕೆಯಾದರು.

ಉಳಿದ ಸ್ಥಾನಗಳ ಆಯ್ಕೆಗೆ ಮತದಾನ ನಡೆದಿದ್ದು ಮತ ಎಣಿಕೆಯ ನಂತರ ಫಲಿತಾಂಶ ಪ್ರಕಟಗೊಂಡಿದೆ. ನೂತನ ನಿರ್ದೇಶಕರಾಗಿ ಎಚ್.ಜೆ.ವರದೇಶ್. ಕೆ.ಟಿ.ಕೈಲಾಸಪತಿ. ಎಚ್.ಬಸವರಾಜ್, ಪಿ.ಎನ್.ರವಿಕುಮಾರ್, ಆರ್.ರಮೇಶ್, ಎಚ್.ಪಿ.ಉದಯ, ಟಿ.ಚಿಕ್ಕೇಗೌಡ, ಪಿ.ಲೋಕೇಶ್, ವಿ.ಎನ್.ಸರ್ವಮಂಗಳಾ, ಪಿ.ಚೈತ್ರಾ. ಸಿ.ಕೆ.ಗಣೇಶ್ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ತಾಲೂಕು ಸಹಕಾರ ಇಲಾಖೆಯ ಹಿತೇಂದ್ರ ಕಾರ್ಯನಿರ್ವಹಿಸಿದರು. ಚುನಾವಣೆಯಲ್ಲಿ ಆಯ್ಕೆಗೊಂಡ ನೂತನ ನಿರ್ದೇಶಕರಿಗೆ ಅಭಿನಂದಿಸಿ ಸಿಹಿ ವಿತರಿಸಲಾಯಿತು.

ವಿವಿಧ ಇಲಾಖೆಯ ಸರ್ಕಾರಿ ನೌಕರರಾದ ರಾಮಚಂದ್ರ, ಪ್ರಶಾಂತ್, ಸುರೇಶ್, ನಟರಾಜ್, ರಘು, ಕೆ.ಎಲ್.ಸುರೇಶ, ರಮೇಶ್, ಅನಂತ್, ಮಧುರೇಶ್, ನಾಗಣ್ಣಗೌಡ, ಎ.ಚಂದ್ರು, ಎಂ.ಕೆ.ಸುರೇಶ, ಸೋಮಶೇಖರ್, ಗಣೇಶ್‌ಕುಮಾರ್, ಕೆ.ಎಚ್.ನಾಗರಾಜ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net