ಲೋಕಸಭಾ ಕ್ಷೇತ್ರ; ತಾರಾ ಪ್ರಚಾರಕರಿಗೆ ಬೇಡಿಕೆ

Photo of Sumalatha Ambareesh
ಸುಮಲತಾ ಅಂಬರೀಷ್​
Published on

ಬೆಂಗಳೂರು:
ಲೋಕಸಭಾ ಚುನಾವಣೆ ಪ್ರಚಾರಕ್ಕೆ ತಾರಾ ಬಳಗವನ್ನು ಕಳುಹಿಸಿಕೊಡುವಂತೆ ಹಲವು ಕ್ಷೇತ್ರಗಳಿಂದ ಬೇಡಿಕೆಗಳು ಬಂದಿವೆ.
ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಿಂದ ಹೆಚ್ಚು ಬೇಡಿಕೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದ್ದು, ಶೀಘ್ರವೇ ಚುನಾವಣಾ ಪ್ರಚಾರ ವೇಳಪಟ್ಟಿಯನ್ನು ಪ್ರಕಟ ಮಾಡಲಾಗುವುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಈಗಷ್ಟೆ ಬಿಜೆಪಿ ಸೇರ್ಪಡೆಯಾಗಿರುವ ಸುಮಲತಾ ಅವರನ್ನು ತಮ್ಮ ಕ್ಷೇತ್ರಕ್ಕೆ ಕಳುಹಿಸಿಕೊಡುವಂತೆ ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಕ್ಷೇತ್ರಗಳಿಂದ ಬೇಡಿಕೆ ಬಂದಿದೆ.
ತಾರಾ ಅನೂರಾಧ, ಮಾಳವಿಕ, ಶ್ರುತಿ ಅವರನ್ನು ಕಳುಹಿಸಿಕೊಡುವಂತೆ ಇನ್ನು ಕೆಲವು ಕ್ಷೇತ್ರಗಳಿಂದ ಬೇಡಿಕೆ ಬಂದಿದೆ ಎಂದು ಮೂಲಗಳು ಖಚಿತಪಡಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net