

ಬೆಂಗಳೂರು: ಉಪ ಚುನಾವಣೆ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನಾವು 136 ಮಂದಿ ಶಾಸಕರಿದ್ದೇವೆೆ. ಬಸ್ ತುಂಬಿ ತುಳುಕುತ್ತಿದೆ. ಉಪ ಚುನಾವಣೆಯಲ್ಲಿ 2-3 ಕ್ಷೇತ್ರ ಗೆದ್ದರೂ ಸಂಖ್ಯೆ ಹೆಚ್ಚಾಗಲಿದೆ. ಸೀರಿಯಸ್ ಏನಿಲ್ಲ, ಉಪ ಚುನಾವಣೆ ಮಾಡುತ್ತೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ನಿರೀಕ್ಷಿತವಾಗಿತ್ತು. ಬಿಜೆಪಿಯಿಂದ ಸ್ಪರ್ಧೆ ಮಾಡಲು ಟಿಕೆಟ್ ಸಿಕ್ಕಿಲ್ಲ, ಹೀಗಾಗಿ ಕಾಂಗ್ರೆಸ್ ಸೇರಿದ್ದಾರೆ. ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ಗೆ ತರುವಲ್ಲಿ ಸುರೇಶ್‌ರ ಪಾತ್ರ ಕೂಡ ಇದೆ ಎಂದರು.
ಜಾತಿ ಗಣತಿಗೆ ಲಿಂಗಾಯತ ಸಮುದಾಯದ ನಾಯಕರ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸಂಪುಟ ಸಭೆಯಲ್ಲಿ ಈ ವಿಚಾರ ಬರಲಿ, ಚರ್ಚೆ ಆಗಲಿ, ಲಿಂಗಾಯತ ಸಮುದಾಯದ ಸಚಿವರೂ ಸಂಪುಟ ಸಭೆಯಲ್ಲಿ ಇರುತ್ತಾರೆ. ಅವರೂ ತಮ್ಮ ಅಭಿಪ್ರಾಯ ಹೇಳಲಿ ಎಂದು ಹೇಳಿದರು.