ತೆಲಂಗಾಣ ಚುನಾವಣಾ ಫಲಿತಾಂಶ; ಕಾಂಗ್ರೆಸ್​​ ಮುನ್ನಡೆ

telangana election
Published on

ನವದೆಹಲಿ: ನಾಲ್ಕು ರಾಜ್ಯಗಳ   ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಯಾರು ಹಿನ್ನೆಡೆ, ಯಾರು ಮುನ್ನೆಡೆ ಎನ್ನುವ ಮಾಹಿತಿ ಕೂಡ ಸಹ ಮೂಡಿದೆ.

ಇತ್ತೀಚೆಗೆ ಚುನಾವಣೆ ನಡೆದ 5 ರಾಜ್ಯಗಳ ಪೈಕಿ 4 ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಮತ ಎಣಿಕೆ ಆರಂಭವಾಗಿದೆ. ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಮಾತ್ರ ವಿಧಾನಸಭೆ ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಕೆಲವೇ ಗಂಟೆಗಳಲ್ಲಿ ಯಾವ ರಾಜ್ಯ ಯಾವ ಪಕ್ಷದ ತೆಕ್ಕೆಗೆ ಬೀಳಲಿದೆ ಎಂಬುದು ಸ್ಫಷ್ಟವಾಗಲಿದೆ. ಮಿಜೋರಾಂ ರಾಜ್ಯದಲ್ಲಿ ನಾಳೆ ಮತಗಳ ಎಣಿಕೆಯಾಗಲಿದೆ

ಮಧ್ಯಪ್ರದೇಶದಲ್ಲಿ 230 ವಿಧಾನಸಭಾ ಕ್ಷೇತ್ರಗಳಿವೆ. ಇಲ್ಲಿ ಬಹುಮತಕ್ಕೆ 116 ಸ್ಥಾನಗಳ ಅಗತ್ಯವಿದೆ. ಛತ್ತೀಸ್‌ಗಢದಲ್ಲಿ 90 ವಿಧಾನಸಭಾ ಸ್ಥಾನಗಳಿದ್ದು, ಇಲ್ಲಿ ಬಹುಮತಕ್ಕೆ 46 ಸ್ಥಾನಗಳ ಅಗತ್ಯವಿದೆ. ರಾಜಸ್ಥಾನದಲ್ಲಿ 200 ವಿಧಾನಸಭಾ ಸ್ಥಾನಗಳಿವೆ. ಯಾವುದೇ ಪಕ್ಷಕ್ಕೆ ಸರ್ಕಾರ ರಚಿಸಲು 101 ಸ್ಥಾನಗಳ ಅಗತ್ಯವಿದೆ. ತೆಲಂಗಾಣದಲ್ಲಿ 119 ವಿಧಾನಸಭಾ ಸ್ಥಾನಗಳಿವೆ. ಇಲ್ಲಿ ಬಹುಮತವು 110 ಆಗಿದೆ. ಮಿಜೋರಾಂನಲ್ಲಿ 40 ವಿಧಾನಸಭಾ ಸ್ಥಾನಗಳಿವೆ.  ಇಲ್ಲಿ ಬಹುಮತದ ಸಂಖ್ಯೆ 21. ಈ ನಾಲ್ಕು ರಾಜ್ಯಗಳ   ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನುವುದು ಕಾದು ನೋಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net