ಕೊಡವ ಹಾಕಿ ಅಕಾಡೆಮಿಗೆ ಪದಾಧಿಕಾರಿಗಳ ಆಯ್ಕೆ

29 vpt. 1
ಕೊಡವ ಹಾಕಿ ಅಕಾಡೆಮಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು.
Published on

ವಿರಾಜಪೇಟೆ: ಕೌಟುಂಬಿಕ ಹಾಕಿ ಉತ್ಸವ ಪ್ರಾರಂಭಗೊಂಡ ನಂತರದಲ್ಲಿ ರಚನೆಗೊಂಡಿದ್ದ ಕೊಡವ ಹಾಕಿ ಅಕಾಡೆಮಿಯ ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಇದರ ಆಡಳಿತ ಮಂಡಳಿಗೆ ಚುನಾವಣೆ ಏರ್ಪಟ್ಟಿದ್ದು, ಈ ಚುನಾವಣೆಯಲ್ಲಿ ಕೌಟುಂಬಿಕ ಹಾಕಿ ಉತ್ಸವದ ಜನಕ ಎಂದೇ ಪ್ರತಿಬಿಂಬಿತವಾಗಿರುವ ಪಾಂಡಂಡ ಕುಟಪ್ಪ ಅವರ ಪುತ್ರ ಹಾಲಿ ಅಧ್ಯಕ್ಷರಾಗಿದ್ದ ಪಾಂಡಂಡ ಬೋಪಣ್ಣ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಇಡೀ ತಂಡ ಅಭೂತಪೂರ್ವ ಜಯಗಳಿಸುವ ಮೂಲಕ ಅಕಾಡೆಮಿಗೆ ಲಗ್ಗೆ ಹಾಕಿದೆ.

ಅಧ್ಯಕ್ಷ, ಕಾರ್ಯಾಧ್ಯಕ್ಷ ಸೇರಿದಂತೆ ಆಡಳಿತ ಮಂಡಳಿಯ ಒಟ್ಟು 15 ಸ್ಥಾನಗಳಿಗೂ ಚುನಾವಣೆ ನಡೆದಿದ್ದು, ಎಲ್ಲ 15 ಸ್ಥಾನಗಳಿಗೂ ಬೋಪಣ್ಣ ನೇತೃತ್ವದ ತಂಡದ ಅಭ್ಯರ್ಥಿಗಳು ಜಯ ಗಳಿಸಿರುವುದು ವಿಶೇಷವಾಗಿದೆ. ಮತ್ತೊಂದು ತಂಡವಾಗಿ ಸ್ಪರ್ಧಿಸಿದ್ದ ಹಾಲಿ ಕಾರ್ಯಾಧ್ಯಕ್ಷರಾಗಿದ್ದ ಮೇಕೇರಿರ ರವಿ ಪೆಮ್ಮಯ್ಯ ನೇತೃತ್ವದ ತಂಡದ ಅಭ್ಯರ್ಥಿಗಳು ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಇನ್ನಿತರ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ.

ಕಳೆದ 25 ವರ್ಷಗಳ ಹಾಕಿ ಉತ್ಸವದಲ್ಲಿ ಪಾಲ್ಗೊಂಡಿದ್ದ 473 ಕೊಡವ ಕುಟುಂಬಗಳ ಪ್ರತಿನಿಧಿಗಳು ಈ ಚುನಾವಣೆಯಲ್ಲಿ ಮತದಾರರಾಗಿದ್ದರು. 473 ಮತದಾರರ ಪೈಕಿ 448 ಕುಟುಂಬಗಳ ನಿಯೋಜಿತ ಪ್ರತಿನಿಧಿಗಳು ಭಾನುವಾರ ವೀರಾಜಪೇಟೆಯ ತ್ರಿವೇಣಿ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿದರು. ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯತನಕ ಚುನಾವಣಾ ಪ್ರಕ್ರಿಯೆ ನಡೆದು ನಂತರ ವಿಜೇತರ ಆಯ್ಕೆ ಪ್ರಕಟಗೊಂಡಿತ್ತು.

ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ಪಾಂಡಂಡ ಬೋಪಣ್ಣ, ಕಾರ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಾಜಿ ಒಲಿಂಪಿಯನ್ ಚೆಪ್ಪುಡೀರ ಎಸ್.ಪೂಣಚ್ಚ, ಮಡಿಕೇರಿ ತಾಲೂಕು ಉಪಾಧ್ಯಕ್ಷ ಸ್ಥಾನಕ್ಕೆ ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ವೀರಾಜಪೇಟೆ ತಾಲೂಕಿನಿಂದ ಕೂತಂಡ ಸುರೇಶ್ ಅಪ್ಪಯ್ಯ, ಸೋಮವಾರಪೇಟೆ ತಾಲೂಕು ಉಪಾಧ್ಯಕ್ಷರಾಗಿ ಬಾಚಿನಾಡಂಡ ಪ್ರದೀಪ್ ಪೂಣಚ್ಚ ಕಾರ್ಯದರ್ಶಿಯಾಗಿ ಕುಲ್ಲೇಟಿರ ಅರುಣ್ ಬೇಬ, ಜಂಟಿ ಕಾರ್ಯದರ್ಶಿಯಾಗಿ ನಾಯಕಂಡ ದೀಪು ಚಂಗಪ್ಪ ಚುನಾಯಿತರಾಗಿದ್ದಾರೆ. ನಿರ್ಧೇಶಕರಾಗಿ ಕಲಿಯಂಡ ಸಂಪನ್ ಅಯ್ಯಪ್ಪ, ಕಾರ್ಯಪ್ಪ, ಸುಳ್ಳಿಮಾಡ ದೀಪಕ್ ಚೆಕ್ಕೆರ ಆದರ್ಶ್, ಬೊಳ್ಳೆಪಂಡ ಜೆ.ಮಂಡೇಪಂಡ ಮೊಣ್ಣಯ್ಯ, ಮೊಣ್ಣಪ್ಪ, ಮುಖೇಶ್ ಮುದ್ದಂಡ ರಶಿನ್ ಸುಬ್ಬಯ್ಯ, ಮುಕ್ಕಾಟರ ಸೋಮಯ್ಯ ಹಾಗೂ ಮಹಿಳಾ ನಿರ್ದೇಶಕಿಯಾಗಿ ಕಂಬೀರಂಡ ರಾಖಿ ಪೂವಣ್ಣ ಜಯ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net