ಮನ್ಸೂರ್ ಅಲಿಖಾನ್ ಬಳಿ ಬಿಎಂಡಬ್ಲೂೃ, ಆಡಿ ಕಾರು; 62.19 ಕೋಟಿ ಆಸ್ತಿ ಪಾಸ್ತಿ

congress logo
Published on

ಬೆಂಗಳೂರು:
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮನ್ಸೂರ್ ಅಲಿಖಾನ್ ಅವರು 62.19 ಕೋಟಿ ರೂ ಬೆಲೆಯ ಆಸ್ತಿ ಪಾಸ್ತಿ ಹೊಂದಿದ್ದಾರೆ.
1.09 ಕೋಟಿ ಬೆಲೆಯ ಬಿಎಂಡಬ್ಲೂೃ ಕಾರು, 98.18 ಲಕ್ಷ ಬೆಲೆಯ ಆಡಿ ಕಾರು, 1.35 ಕೋಟಿ ಬೆಲೆಯ ಚಿನ್ನಾಭರಣ, ಪತ್ನಿ ಬಳಿ 2.27 ಕೋಟಿ ಬೆಲೆಯ ಚಿನ್ನಾಭರಣ, ನಗದು 4.50 ಲಕ್ಷ ರೂ, ಪತನ್‌ಇ ಬಳಿ ನಗದು 4 ಲಕ್ಷ ರೂ ಹೊಂದಿದ್ದಾರೆ.
ಕೊಡಗು ಜಿಲ್ಲೆ ನಾಪೊಕ್ಲುವಿನಲ್ಲಿ ಸಹೋದರನ ಜೊತೆಯಲ್ಲಿ 6 ಎಕರೆ ಜಮೀನು, ದಾಸನಾಪುರ ಹೋಬಳಿ ಹೊಂಬರಹಳ್ಳಿಯಲ್ಲಿ 26.17 ಗುಂಟೆ ಜಮೀನು ಹೊಂದಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ನಾನಾ ಕಡೆಯಲ್ಲಿ, ಮೈಸೂರು ಮತ್ತು ಶ್ರೀರಂಗಪಟ್ಟಣದಲ್ಲಿ ಕೃಷಿಯೇತರವಾದ 20 ಕೋಟಿ ರೂ ಅಂದಾಜಿನ 17 ಎಕರೆ ಜಮೀನಿದೆ. ನಾನಾ ಕಡೆಯಲ್ಲಿ 10 ಕೋಟಿ ರೂ ಬೆಲೆ ಬಾಳುವ ಸೈಟುಗಳಿವೆ. 14.81 ಕೋಟಿ ಬೆಲೆಯ ಮೂವಬಲ್ ಆಸ್ತಿ ಪಾಸ್ತಿಗಳಿದ್ದರೆ, ಇನ್ನುಳಿದವು ಸ್ಥಿರ ಆಸ್ತಿಗಳಾಗಿವೆ. ನಾನಾ ಬ್ಯಾಂಕ್ ಗಳಲ್ಲಿ ಮತ್ತು ವೈಯುಕ್ತಿ ಕೈ ಸಾಲ ಸೇರಿ 6.84 ಕೋಟಿ ರೂ ಸಾಲವಿದೆ. ಪತ್ನಿ ಹೆಸರಿನಲ್ಲಿಯೂ 2.19 ಕೋಟಿ ರೂ ಸಾಲವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net