ಲೋಕಸಭೆ ಚುನಾವಣೆ; ಸಾಲು ರಜೆಗಳ ಹಿನ್ನೆಲೆ ಮೂರು ದಿನ ಪ್ರವಾಸ;ರಿಲ್ಯಾಕ್ಸ್‌ಗೆ ತೆರಳಲು ಸಿದ್ದವಾದ ಕಾರ್ಯಕರ್ತರು

Published on

ಬೆಂಗಳೂರು:
ಲೋಕಸಭೆ ಚುನಾವಣೆ ಜೊತೆಗೆ ಮೂರು ದಿನ ಪ್ರವಾಸ ಫಿಕ್ಸ್ ಮಾಡಿಕೊಂಡು ಮತದಾನ ಮಾಡಲು ತಮ್ಮ ಮೂಲ ನೆಲೆಗಳತ್ತ ನಗರದಿಂದ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಶುಕ್ರವಾರ ಮತದಾನ ಮುಗಿದ ಬಳಿಕ ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ಬೇಸಿಗೆ ಜಾಲಿ ಟ್ರಿಪ್ ಮೂಡ್‌ನಲ್ಲಿ ಜನ ಹೊರಟಿದ್ದಾರೆ.
ದೇವಸ್ಥಾನ, ಹೋಂ ಸ್ಟೇ ಮತ್ತಿತರ ಪಿಕ್‌ನಿಕ್ ಸ್ಥಳಗಳಿಗೆ ತಮ್ಮ ಸ್ವಂತ ವಾಹನಗಳಲ್ಲಿ ತೆರಳುತ್ತಿದ್ದರೆ, ಇನ್ನು ಕೆಲವರು ಟಿಟಿ ಮಾಡಿಕೊಂಡು ಹೊರಟಿದ್ದಾರೆ. ಬಸ್ ಮತ್ತು ರೈಲಿನ ಮೂಲಕವೂ ಜನರು ತೆರಳುತ್ತಿರುವುದರಿಂದ ಎಲ್ಲಾ ಪ್ರವಾಸ ಮಾರ್ಗಗಳಲ್ಲಿ ಜನಸಂದಣಿ ಹೆಚ್ಚಾಗಿದೆ.
ಇನ್ನೊಂದು ದಿನ ಕಳೆದರೆ ಸಾಕು ಎಂದು ಕಾಯುತ್ತಿದ್ದ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರುಗಳು ಕೂಡ ರಿಲ್ಯಾಕ್ಸ್ ಮೂಡಿಗೆ ತೆರಳಲು ಕಾಯುತ್ತಿದ್ದಾರೆ. ಕೆಲವರು ಈಗಾಗಲೇ ರೆಸಾರ್ಟ್ ಬುಕ್ ಮಾಡಿಕೊಂಡಿದ್ದರೆ, ಇನ್ನು ಕೆಲವರು ಹೋಂ ಸ್ಟೇಗಳ ಕಡೆಗೆ ಮುಖ ಮಾಡಿದ್ದಾರೆ.
ಚುನಾವಣೆ ಜೋಷ್‌ನಲ್ಲಿದ್ದ ಅಭ್ಯರ್ಥಿಗಳು ಕೂಡ ಇನ್ನು ಲಿತಾಂಶ ಬರುವ ತನಕ ರಿಲ್ಯಾಕ್ಸ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ಕೆಲವರು ವಿದೇಶ ಪ್ರವಾಸದ ಪ್ಲಾನ್ ಮಾಡಿದ್ದರೆ, ಇನ್ನು ಕೆಲವರು ದೇವಸ್ಥಾನ, ಟೂರಿಸ್ಟ್ ಜಾಗಗಳಿಗೆ ತೆರಳಲು ಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net