

ನವದೆಹಲಿ: ಜಮ್ಮು-ಕಾಶ್ಮೀರ, ಹರಿಯಾಣ ರಾಜ್ಯ ವಿಧಾನಸಭೆಗೆ ನಡೆದಿದ್ದ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆ ಕಾರ್ಯ (Election Counting) ಆರಂಭವಾಗಿದ್ದು, ಜಮ್ಮು-ಕಾಶ್ಮೀರದಲ್ಲಿ (Jammu Kashmir) ಬಿಜೆಪಿ, ಹರಿಯಾಣದಲ್ಲಿ (Haryana) ಕಾಂಗ್ರೆಸ್ ಆರಂಭಿಕ ಮುನ್ನಡೆಯನ್ನು ಸಾಧಿಸಿದೆ.
90 ಸದಸ್ಯಬಲದ ಜಮ್ಮು ಹಾಗೂ ಹರಿಯಾಣ ವಿಧಾನಸಭೆ ಗೆಲ್ಲಲು 46 ಶಾಸಕರ ಅಗತ್ಯವಿದ್ದು, ಹರಿಯಾಣದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸುವ ಇರಾದೆಯಲ್ಲಿದೆ. ಎಕ್ಸಿಟ್ ಪೋಲ್ ವರದಿ ಪ್ರಕಾರ ಹರಿಯಾಣದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ಹೇಳಲಾಗಿದ್ದು, ಮತ ಎಣಿಕೆ ಕಾರ್ಯದ ಬಳಿಕ ಸಂಪೂರ್ಣ ಚಿತ್ರ ಹೊರಬೀಳಲಿದೆ.
ಕಣಿವೆ ರಾಜ್ಯದಲ್ಲಿ ದಶಕದ ಬಳಿಕ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಮಾಡಿಕೊಂಡಿದ್ದು, ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿವೆ. ಇತ್ತ ಬಿಜೆಪಿಯೂ ಸರ್ಕಾರ ರಚಿಸುವುದಾಗಿ ಹೇಳಿದ್ದು, ಓಮರ್ ಅಬ್ದುಲ್ಲಾ ತಮ್ಮ ಪಿಡಿಪಿ ಪಕ್ಷಕ್ಕೆ ಜನ ಮಣೆ ಹಾಕಲಿದ್ದಾರೆ ಎಂಬ ನಂಬಿಕೆಯಲ್ಲಿದ್ದಾರೆ.
ಲೋಕಸಭೆಯ (Loksabha) ಬಳಿಕ ನಡೆಯುತ್ತಿರುವ ಮೊದಲ ರಾಜ್ಯ ವಿಧಾನಸಭೆ ಚುನಾವಣೆಯು(State Assembly Elections) ಮುಂಬರುವ ಮಹಾರಾಷ್ಟ್ರ (Maharashtra) ಹಾಗೂ ಜಾರ್ಖಂಡ್ (Jharkhand) ಎಲೆಕ್ಷನ್ಗೆ ದಿಕ್ಸೂಚಿಯಾಗಿದ್ದು, ಬಿಜೆಪಿ ನೇತೃತ್ವದ ಎನ್ಡಿಎಗೆ ಈ ಚುನಾವಣೆ ದೊಡ್ಡ ಅಗ್ನಿಪರೀಕ್ಷಯಾಗಿದೆ.