ಚುನಾವಣೆ ಇನ್ನೇನು ಶುರು; ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗದ ತೀವ್ರ ಕಸರತ್ತು

election commission
Published on

ಬೆಂಗಳೂರು: ಚುನಾವಣೆ ಇನ್ನೇನು ಹತ್ತಿರದಲ್ಲೇ ಇದ್ದು ಚುನಾವಣಾ ಆಯೋಗ ಮತದಾನದ ವಿಚಾರವಾಗಿ ಜಾಗೃತಿ ಕಾರ್ಯವನ್ನು ಜೋರಾಗಿಯೇ ನಡೆಸುತ್ತಿದೆ.

ರಾಹುಲ್ ದ್ರಾವಿಡ್, ಚಂದ್ರಶೇಖರ ಕಂಬಾರ ಸೇರಿ ಹಲವು ಸ್ಟಾರ್ಸ್ ಗಳಿಂದ ಜಾಗೃತಿ ಹುಟ್ಟಿಸಲು ಕಸರತ್ತು ನಡೆಸಲಾಗುತ್ತಿದೆ. ಜಿಲ್ಲಾ ಕೇಂದ್ರಗಳಲ್ಲೂ ಮತದಾನದ ಬಗ್ಗೆ ಜಾಗೃತಿ ಅಭಿಯಾನ ಶುರು ಮಾಡಲಾಗಿದ್ದು ರಾಜ್ಯದಾದ್ಯಂತ ಸೆಲೆಬ್ರಿಟಿಗಳ ಮೂಲಕ ಮತದಾನ ಜಾಗೃತಿ ಜೋರಾಗಿ ನಡೆಯುತ್ತಿದೆ.

ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಸೆಲೆಬ್ರಿಟಿಗಳು ಹಾಗೂ ಆಯಾ ಕ್ಷೇತ್ರದ ಪ್ರಮುಖರನ್ನು ಸ್ಟಾರ್ ಐಕಾನ್ ಗಳನ್ನಾಗಿ ಆಯ್ಕೆ ಮಾಡಲಾಗಿದೆ. ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್, ಜ್ಞಾನಪೀಠ ಪ್ರಶಸ್ತಿ ವಿಜೇತ ಚಂದ್ರಶೇಖರ ಕಂಬಾರ, ದಿವ್ಯಾಂಗ ಎಸ್ ಅಶ್ವಿನಿ ಅಂಗಡಿ ಸೇರಿ ಹಲವರು ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಜಿಲ್ಲಾ ಕೇಂದ್ರಗಳಲ್ಲೂ ಮತದಾನದ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತದ್ದು ಸಾಮಾಜಿಕ ಜಾಲತಾಣಗಳಲ್ಲಿ ಅತಿಹೆಚ್ಚು ಫಾಲೋವರ್ಸ್ ಹೊಂದಿರುವವರ ಮೂಲಕ ಮತದಾನದ ಜಾಗೃತಿ ಮೂಡಿಸಲು ಯೋಜನೆ ರೂಪಿಸಲಾಗಿದೆ.

ಬೈಕ್   ರ‌್ಯಾಲಿ, ಬೀದಿ ನಾಟಕ, ಶಾಲೆಗಳಿಗೆ ಪೇಂಟ್ ಬಳಿಯೋದು, ಮನೆ ಮನೆಗೆ ತೆರಳಿ ಮತದಾನ ಮಾಡುವಂತೆ ಮಾಹಿತಿ ನೀಡಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಿ ಮತದಾನದ ಪ್ರಮಾಣ ಹೆಚ್ಚಳಕ್ಕೆ ತೀವ್ರ ಕಸರತ್ತನ್ನು ಚುನಾವಣಾ ಆಯೋಗ. ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net