ಕೆ.ಆರ್.ನಗರ ತಾಲೂಕು ವಕೀಲರ ಸಂಘಕ್ಕೆ ಅವಿರೋಧವಾಗಿ ಆಯ್ಕೆ

02 KRN-1
ವಕೀಲರ ಸಂಘದ ಕೆ.ಆರ್.ನಗರ ತಾಲೂಕು ಘಟಕಕ್ಕೆ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ವಕೀಲರು ಅಭಿನಂದಿಸಿದರು.
Published on

ಕೆ.ಆರ್.ನಗರ: ವಕೀಲರ ಸಂಘದ ತಾಲೂಕು ಅಧ್ಯಕ್ಷರಾಗಿ ಜಿ.ಎಲ್.ಧರ್ಮ, ಉಪಾಧ್ಯಕ್ಷರಾಗಿ ಎಚ್.ಎಸ್.ಚೇತನ್‌ಕುಮಾರ್, ಕಾರ್ಯದರ್ಶಿಯಾಗಿ ಎ.ಪಿ.ಪರಮೇಶ್, ಜಂಟಿ ಕಾರ್ಯದರ್ಶಿ ರವೀಶ್‌ಕುಮಾರ್, ಖಜಾಂಚಿಯಾಗಿ ಕೆ.ಎಂ.ಕಾರ್ತಿಕ್ ಹಾಗೂ ಮಹಿಳಾ ಪ್ರತಿನಿಧಿಯಾಗಿ ಗಾಯತ್ರಿ ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣದ ನ್ಯಾಯಾಲಯದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಈ ಆಯ್ಕೆ ನಡೆಯಿತು.
ನೂತನ ಅಧ್ಯಕ್ಷ ಜಿ.ಎಲ್.ಧರ್ಮ ಮಾತನಾಡಿ, ನನ್ನ ಅಧಿಕಾರಾವಧಿಯಲ್ಲಿ ವಕೀಲರ ಹಿತ ಕಾಯುವ ಜತೆಗೆ ಸಂಘದ ಕಾರ್ಯ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಪಡೆಯಲಾಗುವುದು. ನ್ಯಾಯಕ್ಕಾಗಿ ವಕೀಲರ ಬಳಿ ಬರುವ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಮಾಜಿ ಅಧ್ಯಕ್ಷ ಕೆ.ಎಸ್.ದಿಲೀಪ್ ಮಾತನಾಡಿ, ಚಂದ್ರಮೌಳಿ ನೇತೃತ್ವದಲ್ಲಿ ಸಂಘ ನಡಾವಳಿಗಳಿಗೆ ವಿರುದ್ಧವಾಗಿ ಪದಾಧಿಕಾರಗಳನ್ನು ಆಯ್ಕೆ ಮಾಡಲಾಗಿದ್ದು, ಅದು ಬೈಲಾದ ಉಲ್ಲಂಘನೆಯಾಗಿದೆ. ಹಾಗಾಗಿ ಅಂತಹ ಪದಾಧಿಕಾರಿಗಳಿಗೆ ಮಾನ್ಯತೆ ಇಲ್ಲ. ನಮ್ಮ ಈ ಸಂಘ ಅಧಿಕೃತ ಸಂಘ. ಹಾಗಾಗಿ, ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.

ಅಡಾಕ್ ಕಮಿಟಿ ಅಧ್ಯಕ್ಷ ಜಿ.ಆರ್.ರಾಮೇಗೌಡ ಮಾತನಾಡಿ, ಸಂಘದ ಮನವಿಯಂತೆ ಅಡಾಕ್ ಕಮಿಟಿ ಚುನಾವಣೆ ಘೋಷಣೆ ಮಾಡಿದೆ. ರಸೀದಿ ಪಡೆದು ಚುನಾವಣೆಗೆ ಸ್ಪರ್ಧಿಸಿದವರನ್ನು ಮಾತ್ರ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ನೂತನ ಪದಾಧಿಕಾರಿಗಳನ್ನು ವಕೀಲರಾದ ರುದ್ರಮೂರ್ತಿ, ದಯಾನಂದ್, ಕೆ.ಪಿ.ರಮೇಶ್, ಮಹದೇವಸ್ವಾಮಿ, ಶಿವಶಂಕರ್, ಎಸ್.ಶಿವರಾಜ್, ಬಿಪಿನ್, ಕೆಂಪನಕೊಪ್ಪಲು ದಿನೇಶ್, ಹೆಬ್ಬಾಳುಸಂತೋಷ್, ನೇತ್ರಾವತಿ, ರಾಧಿಕಾ, ವೀರಭದ್ರಪ್ಪ, ಜೆ.ಎಸ್.ರಘು, ಸಿ.ಎಂ.ಚೇತನ್, ಹೊಸೂರುಕಲ್ಲಹಳ್ಳಿ ಮಹೇಶ, ಲೋಕೇಶ್, ಕೊಡಿಯಾಲ ಮಹೇಶ, ಅನಂತ್ ಮತ್ತಿತರರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net