ವೃದ್ಧ ಮಹಿಳೆಯನ್ನು 28 ದಿನಗಳ ಕಾಲ ಡಿಜಿಟಲ್ ಬಂಧನದಲ್ಲಿಟ್ಟು 56 ಲಕ್ಷ ರೂ ವಂಚನೆ!Digital Detention

Digital Detention
Published on

Digital Detention: ವೃದ್ಧ ಮಹಿಳೆಯ ಆಧಾರ್ ಕಾರ್ಡ್ ಬಳಸಿ ನಕಲಿ ಖಾತೆಗಳನ್ನು ತೆರೆದು ಆಕೆಯನ್ನು ಡಿಜಿಟಲ್ ಬಂಧನದಲ್ಲಿಟ್ಟು, 56 ಲಕ್ಷ ರೂ. ವಂಚನೆ ವಂಚಿಸಿದ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಸೈಬರ್ ಖದೀಮರು ವೃದ್ಧ ಮಹಿಳೆಯ ಆಧಾರ್ ಕಾರ್ಡ್ ಮೂಲಕ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆಯುವುದಾಗಿ ಮತ್ತು ಲಂಡನ್‌ನಲ್ಲಿ ವಾಸಿಸುತ್ತಿರುವ ಆಕೆಯ ಮಗನನ್ನು ಬಂಧಿಸುವುದಾಗಿ ಬೆದರಿಕೆ ಹಾಕುವ ಮೂಲಕ 28 ದಿನಗಳ ಕಾಲ ಡಿಜಿಟಲ್ ಬಂಧನದಲ್ಲಿಟ್ಟು, 56 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ. ಜೊತೆಗೆ  ಆ ಮಹಿಳೆಯನ್ನು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಮಾತ್ರ ವಿಡಿಯೋ ಕಾಲ್​ ಮೂಲಕ ಡಿಜಿಟಲ್ ಬಂಧನದಲ್ಲಿರಿಸಿ, ಈ ಬಗ್ಗೆ ಯಾರಿಗೂ ಏನನ್ನೂ ಹೇಳದಂತೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದರು.

ಘಟನೆ ಏನು?

ಏಪ್ರಿಲ್ 1 ರಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತು . ದೂರಸಂಪರ್ಕ ಇಲಾಖೆಯ ಉದ್ಯೋಗಿ ಎಂದು ಹೇಳಿಕೊಂಡು ಕರೆ ಮಾಡಿದ ವ್ಯಕ್ತಿ, ತನ್ನ ಮೊಬೈಲ್ ಫೋನ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದು, ಅದರ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ. ನಿಮ್ಮ ಸಂಖ್ಯೆಯನ್ನು ಎರಡು ಗಂಟೆಗಳಲ್ಲಿ ನಿರ್ಬಂಧಿಸಲಾಗುತ್ತದೆ ಎಂದು ಅವರು ಹೇಳಿದ್ದರು ಎನ್ನುವುದನ್ನು ಮಹಿಳೆ ಹೇಳಿಕೊಂಡಿದ್ದಾಳೆ.

ಇದಾದ ನಂತರ, ಅಧಿಕಾರಿ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಮಾತನಾಡಿ, ನಿಮ್ಮ ಸಂಖ್ಯೆಯಿಂದ ಅಶ್ಲೀಲ ಸಂದೇಶಗಳು ಮತ್ತು ಫೋಟೋಗಳನ್ನು ಕಳುಹಿಸಲಾಗಿದೆ. ನೀವು ಇದನ್ನು ಮಾಡದಿದ್ದರೆ ಆನ್‌ಲೈನ್‌ನಲ್ಲಿ ಎಫ್‌ಐಆರ್ ಸಲ್ಲಿಸಿ ಎಂದು ಮಹಿಳೆ ಹೇಳಿದ ನಂತರ ಕರೆಯನ್ನು ಸಿಬಿಐಗೆ ಸಂಪರ್ಕಿಸಲಾಗುತ್ತಿದೆ ಎಂದು ತಿಳಿಸಿ, ಇದಾದ ನಂತರ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು, ಬ್ಯಾಂಕ್ ಮ್ಯಾನೇಜರ್ ಒಬ್ಬರು ನಿಮ್ಮ ಆಧಾರ್ ಕಾರ್ಡ್ ಮೂಲಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿ ಇದರೊಂದಿಗೆ, ಅವರು ಆಧಾರ್ ಕಾರ್ಡ್ ಮೂಲಕ ಅನೇಕ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ, ಅದರಿಂದ ಹವಾಲಾ ಹಣವನ್ನು ವರ್ಗಾಯಿಸಲಾಗಿದೆ. ಇದು ಗಂಭೀರ ವಿಷಯ, ಆದ್ದರಿಂದ ನಿಮ್ಮನ್ನು ಮನೆಯಲ್ಲಿ ಡಿಜಿಟಲ್ ಬಂಧನಕ್ಕೆ ಒಳಪಡಿಸಲಾಗುತ್ತಿದೆ.

ನಿಮ್ಮ ಎಲ್ಲಾ ಖಾತೆಗಳನ್ನು ಪರಿಶೀಲಿಸಲಾಗುವುದು ಮತ್ತು ಲಂಡನ್‌ನಲ್ಲಿ ವಾಸಿಸುವ ನಿಮ್ಮ ಮಗನನ್ನೂ ಕರೆಯಲಾಗುವುದು ಎಂದು ಮಹಿಳೆಗೆ ಹೆದರಿಸಿದ್ದಾರೆ. ಆಕೆಯ ಮೇಲೆ ಮಾನಸಿಕ ಒತ್ತಡ ಹೇರಲಾಗಿದ್ದು, ಈ ಬಗ್ಗೆ ಯಾರೊಂದಿಗಾದರೂ ಹೇಳಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಮಹಿಳೆ ತಿಳಿಸಿದ್ದಾಳೆ.

ಆಕೆಯ ಗಂಡ ಆಫೀಸಿಗೆ ಹೋದ ನಂತರ ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ವಿಡಿಯೋ ಕಾಲ್​​ ಮೂಲಕ ನಿಗಾ ಇಟ್ಟು, ದುಷ್ಕರ್ಮಿಗಳು ಆಕೆಯ ಬಳಿ 56 ಲಕ್ಷ ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.

ಡಿಜಿಟಲ್ ಬಂಧನದಿಂದ ಮುಕ್ತರಾದ ನಂತರ, ವೃದ್ಧ ಮಹಿಳೆ ತನ್ನ ಪತಿಗೆ ನಡೆದ ಎಲ್ಲ ವಿಷಯಗಳನ್ನು ತಿಳಿಸಿದಳು. ನಂತರ ಅವರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಣ ವರ್ಗಾವಣೆಯಾದ ಖಾತೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net