ಕಸ ಸಂಗ್ರಹಿಸುತ್ತಿದ್ದ ವೃದ್ಧ ವೈರಲ್ ವಿಡಿಯೋಗಳಿಗೆ ಬಲಿ.. ಸಾರ್ವಜನಿಕವಾಗಿ ಆತ್ಮಹತ್ಯೆ!

dead
Published on

ಜೈಪುರ: ಗೂಂಡಾಗಿರಿಯ ಯುವಕನ ವೈರಲ್‌ ವಿಡಿಯೋದಿಂದ ಕಿರುಕುಳ ತಾಳಲಾರದೆ ವೃದ್ಧರೊಬ್ಬರು ಜನರೆದುರೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಸ್ಥಾನದಲ್ಲಿ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ .

ಬರ್ಮರ್ ಜಿಲ್ಲೆಯ ಚೋಹ್ತಾನ್ ಗ್ರಾಮದಲ್ಲಿ ಪ್ರತಾಪ್ ಸಿಂಗ್ ಎಂಬ ವೃದ್ಧ ಪ್ಲಾಸ್ಟಿಕ್ ಬಾಟಲಿ ಮತ್ತಿತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಬರುವ ಅಲ್ಪ ಮೊತ್ತದಲ್ಲಿ ಬದುಕು ಸಾಗಿಸುತ್ತಿದ್ದರು. ಸ್ಥಳೀಯರು ಅವರನ್ನು ಬಾಬಾಜಿ ಎಂದೂ ಕರೆಯುತ್ತಿದ್ದರು.

ಕಸವನ್ನು ಯಾರಾದರೂ ಖರೀದಿಸುವವರು ಸಿಗುತ್ತಾರೆಯೇ ಎಂದು ಕೆಲವು ಯುವಕರನ್ನು ಕೇಳುತ್ತಾರೆ. ಆ ಯುವಕರು ಕಸ ಕೊಳ್ಳುವಂತೆ ಹೇಳುವ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್ ಆಗುತ್ತಿದ್ದಂತೆ, ಹುಡುಗರು ಆತನಿಗೆ ಹಣ ಕೊಡುವಂತೆ ಕಿರುಕುಳ ನೀಡಲಾರಂಭಿಸಿದ್ದರು.

ಹಣ ಕೊಟ್ಟು ಸಾಕಾಗಿದ್ದ ವೃದ್ಧನಿಗೆ ಭಾನುವಾರವೂ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ವೃದ್ಧ ಕೊನೆಗೆ ಪಹ್ಲೋಡಿಯ ರಾಜ್ಯ ಹೆದ್ದಾರಿ ಬದಿಯಲ್ಲಿ ಜನರೆದುರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜನರು ಏನಾಗುತ್ತಿದೆ ಎಂದು ಅರ್ಥಮಾಡಿಕೊಳ್ಳುವಷ್ಟರಲ್ಲಿ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರತೆಗೆದು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net