ಇತ್ತೀಚೆಗೆ ಮದುವೆ ಫೋಟೋಶೂಟ್ ಎಂಬುದೂ ಒಂದು ಸಂಪ್ರದಾಯವೆಂಬಂತೆ ಬದಲಾಗಿದೆ. ಮದುವೆಗೆ ಮೊದಲು..ಮದುವೆಯಲ್ಲಿ..ಮದುವೆ ನಂತರ ಹೀಗೆ ವಧು-ವರರು ವಿವಿಧ ರೀತಿಯ, ವಿಭಿನ್ನ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾರೆ
ಹಾಗೇ ಈಗೊಂದು ಜೋಡಿ ತಮ್ಮ ಮದುವೆ ಫೋಟೋಶೂಟ್ ಮಾಡಿಸಿಕೊಂಡಿದೆ. ಅದರಲ್ಲೇನು ವಿಶೇಷ ಎನ್ನಬೇಡಿ..ಅಲ್ಲೇ ಇರೋದು ಸಣ್ಣ ಟ್ವಿಸ್ಟ್.
ಕೇರಳದ ಇಡುಕ್ಕಿ ಜಿಲ್ಲೆಯ ವೃದ್ಧ ದಂಪತಿ ಇದೀಗ ಮದುವೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅವರ ವಿವಾಹ ನಡೆದು 58 ವರ್ಷಗಳೇ ಕಳೆದು ಹೋಗಿವೆ. ಆದರೆ ಇದೀಗ ಅಜ್ಜಿ ವಧುವಿನಂತೆ..ಅಜ್ಜ ವರನಂತೆ ಶೃಂಗರಿಸಿಕೊಂಡು ವಿವಿಧ ರೀತಿಯ ಫೋಟೋ ತೆಗೆಸಿಕೊಂಡಿದ್ದಾರೆ. ಇದನ್ನೂ ಓದಿ: ಶಶಿಕಲಾ ನಟರಾಜನ್ರ 2000 ಕೋಟಿ ರೂ.ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಐಟಿ
ವೃದ್ಧ ಕುಂಜೊಟ್ಟಿ ಅವರಿಗೆ 85 ವರ್ಷ. ಅವರ ಪತ್ನಿ ಚಿನ್ನಮ್ಮಾಗೆ 80 ವರ್ಷ. ಅವರ ಮದುವೆಯಾದ ಕಾಲದಲ್ಲಿ ಈ ಫೋಟೋಗಳೆಲ್ಲ ಇರಲಿಲ್ಲ. ವೃದ್ಧ ದಂಪತಿಯ ಮೊಮ್ಮಗ ಮದುವೆ ಫೋಟೋಗ್ರಾಫರ್ ಆಗಿದ್ದು, ತನ್ನ ಅಜ್ಜ-ಅಜ್ಜಿಯ ವಿವಾಹದ ಒಂದೂ ಫೋಟೋ ಇಲ್ಲವಲ್ಲ ಎಂಬ ಕಾರಣಕ್ಕೆ ಹೀಗೊಂದು ವಿಭಿನ್ನ ಹೆಜ್ಜೆ ಇಟ್ಟಿದ್ದಾನೆ. ತನ್ನ ಇನ್ಸ್ಟಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಮಾನಹಾನಿ ಮಾಡ್ತಿರೋದು ರಿಚಾ, ನಾನಲ್ಲ … ಪಾಯಲ್ ಖಡಕ್ ಉತ್ತರ

ಕುಂಜೊಟ್ಟಿ ಅವರು ಕಪ್ಪು ಸೂಟ್ ಧರಿಸಿ, ಕನ್ನಡಕ ಹಾಕಿ ಹೊಸ ಮದುಮಗನಂತೆ ಕಾಣುತ್ತಾರೆ. ಹಾಗೇ ಚಿನ್ನಮ್ಮಾ ಬಿಳಿ ಸೀರೆಯನ್ನುಟ್ಟು ವಧುವನಿಂತೆ ಕಾಣುತ್ತಿದ್ದಾರೆ. ಇಬ್ಬರ ಕೈಯಲ್ಲೂ ಹೂಗುಚ್ಛ ಇದೆ. ಹಾಗೇ ವಿವಿಧ ಫೋಸ್ ನೀಡಿದ್ದಾರೆ. ಅಜ್ಜ-ಅಜ್ಜಿಯ ಮದುವೆ ಫೋಟೋ ನೋಡಿ ನೆಟ್ಟಿಗರಂತೂ ಫುಲ್ ಖುಷಿಯಾಗಿದ್ದಾರೆ. (ಏಜೆನ್ಸೀಸ್)