

ಬೆಂಗಳೂರು: ‘ವ್ಯಾಲೆಂಟೈನ್ಸ್ ಡೇ’ ಹಿಂದಿನ ದಿನವನ್ನು ‘ಕಿಸ್ ಡೇ’ ಎಂದೂ ಆಚರಿಸಲಾಗುತ್ತಿದೆ. ಆದರೆ ಸ್ಯಾಂಡಲ್ವುಡ್ ಮಟ್ಟಿಗೆ ಈ ‘ಕಿಸ್ ಡೇ’ ಪ್ರೇಮಿಗಳ ದಿನಕ್ಕೂ ಮುಂದುವರಿದಿದೆ. ಅಂದರೆ, ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಬಿಡುಗಡೆಯಾದ ಸಿನಿಮಾ ಟೀಸರ್-ಪೋಸ್ಟರ್ಗಳಲ್ಲಿ ಮುತ್ತೇ ಹೈಲೈಟ್! ಆ ಮೂಲಕ ‘ಮುತ್ತೇ ಪ್ರಥಮ.. ಅದುವೇ ಜಗದ ನಿಯಮ..’ ಎಂಬ ‘ಪ್ರೇಮಲೋಕ’ದ ‘ಯುಗಪುರುಷ’ನ ಮಾತನ್ನು ಚಿತ್ರರಂಗ ಮತ್ತೆ ಸಾಬೀತುಪಡಿಸಿದೆ.
ಹೇಗೆ ಒಂದು ಸಿನಿಮಾ ಎಂದರೆ ಹಾಡಿರಬೇಕು, ಫೈಟಿರಬೇಕು ಎಂಬ ಅಲಿಖಿತ ನಿಯಮ ಚಿತ್ರರಂಗದಲ್ಲಿದೆಯೋ ಹಾಗೇ ಸಿನಿಮಾ ಎಂದರೆ ಮುತ್ತಿರಬೇಕು, ಪ್ರೀತಿಯ ಮತ್ತಿರಬೇಕು ಎಂಬ ಅಘೋಷಿತ ನಿಯಮವೂ ಸ್ಯಾಂಡಲ್ವುಡ್ನಲ್ಲಿದೆ. ಬಹುಶಃ ಅದನ್ನು ಪುಷ್ಟೀಕರಿಸುವಂತೆ ನಾಯಕ-ನಾಯಕಿಯರು ತುಟಿಗೆ ತುಟಿ ಹಚ್ಚಿ ‘ಅಧರಂ ಮಧುರಂ’ ಎಂಬ ಸಂದೇಶ ಸಾರುವ ಯತ್ನ ಮಾಡಿದ್ದಾರೆ.
ರಕ್ಷಿತಾ ಪ್ರೇಮ್ ನಿರ್ವಣ, ಅವರ ಪತಿ ‘ಜೋಗಿ’ ಪ್ರೇಮ್ ನಿರ್ದೇಶನ, ರಕ್ಷಿತಾ ಸೋದರ ರಾಣಾ ನಾಯಕನಾಗಿ ಸ್ಯಾಂಡಲ್ವುಡ್ಗೆ ಪ್ರವೇಶಿಸಿರುವ ಪ್ರೇಮಮಯ ‘ಕೌಟುಂಬಿಕ’ ಸಿನಿಮಾ ‘ಏಕ್ಲವ್ಯು’ ಟೀಸರ್ ಪ್ರೇಮಿಗಳ ದಿನದ ಪ್ರಯುಕ್ತ ಬಿಡುಗಡೆ ಆಗಿದೆ. ಈ ಚಿತ್ರದ ಟೀಸರ್ನಲ್ಲಿ ನಾಯಕ ರಾಣಾ, ನಾಯಕಿ ರಚಿತಾ ರಾಮ್ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಸಿಗರೇಟ್ಗೆ ಬೆಂಕಿ ಹಚ್ಚಿ ಧಮ್ ಹೊಡೆಯುವ ದೃಶ್ಯದೊಂದಿಗೆ ಆರಂಭವಾಗುವ ಈ ಟೀಸರ್ ಇಬ್ಬರೂ ತುಟಿಗೆ ತುಟಿ ಹಚ್ಚಿ ಪಡ್ಡೆಗಳ ಹೃದಯದ ‘ರಿದಮ್ ಹೆಚ್ಚಿಸುವ ದೃಶ್ಯದೊಂದಿಗೆ ಕೊನೆಯಾಗುತ್ತದೆ. ಮಾತ್ರವಲ್ಲ, ‘ಈ ಹುಡ್ಗೀರು ವೆದರ್ ಇದ್ದಂಗೆ.. ಯಾವಾಗ್ ಬರ್ತಾರೆ, ಯಾವಾಗ್ ಹೋಗ್ತಾರೆ ಅಂತ ಗೊತ್ತೇ ಆಗಲ್ಲ.. ಆದ್ರೆ ಹುಡ್ಗ್ರು ವೆದರ್ ರಿಪೋರ್ಟ್ ಇದ್ದಂಗೆ.. ಇವತ್ ಬರ್ತಾಳೆ ನಾಳೆ ಬರ್ತಾಳೆ ಅಂತ ಕಾಯ್ತನೇ ಇರ್ತೀವಿ..’ ಅಂತ ನಾಯಕ ರಾಣಾ ಪ್ರೀತಿಸುವ ಹುಡುಗ-ಹುಡುಗಿಯರನ್ನು ವ್ಯಾಖ್ಯಾನಿಸುವ ಜತೆಗೆ ಪ್ರೀತಿ ಎಂದರೇನು ಎಂಬುದಕ್ಕೂ ವ್ಯಾಖ್ಯ ನೀಡಿದ್ದಾರೆ.
ಇನ್ನು ‘ಪ್ರೇಮಲೋಕ’ದ ‘ರಣಧೀರ’ ರವಿಚಂದ್ರನ್ ಅವರ ಪುತ್ರ ಮನುರಂಜನ್ ನಾಯಕನಾಗಿ ನಟಿಸಿರುವ ‘ಮುಗಿಲ್ ಪೇಟೆ’ ಸಿನಿಮಾದಲ್ಲಿ ಮುತ್ತಿಲ್ಲದೇ ಇರುತ್ಯೇ?. ಭರತ್ ನಾವುಂದ ನಿರ್ದೇಶನದ ಈ ಸಿನಿಮಾದಲ್ಲಿ ಮನುರಂಜನ್ ಹಾಗೂ ಖಯಾದು ಲೋಹರ್ ನಾಯಕ-ನಾಯಕಿ ಆಗಿ ಕಾಣಿಸಿಕೊಂಡಿದ್ದು, ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ಈ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ. ಇದರಲ್ಲಿ ‘ಮುತ್ತೇ ಪ್ರಥಮ..’ ಎನ್ನುವಂತೆ ನಾಯಕಿಯನ್ನು ಮನು ಬರಸೆಳೆದು ಲಿಪ್ ಟು ಲಿಪ್ ಟಚ್ ಮಾಡಲು ಪ್ರಯತ್ನಿಸುವಂಥ ಚಿತ್ರಣವಿದೆ.
ಮತ್ತೊಂದೆಡೆ ‘ಐ ಲವ್ ಯೂ’ ಎಂಬುದನ್ನು ಟೈಟಲ್ನಲ್ಲೇ ಸಾಂಕೇತಿಕವಾಗಿ ಹೊಂದಿರುವ ‘ಶಿವ 143’ ಚಿತ್ರದ ಪೋಸ್ಟರ್ನಲ್ಲೂ ಅಷ್ಟೇ. ‘ಜಯಣ್ಣ ಫಿಲಮ್್ಸ’ ನಿರ್ವಣ, ಅನಿಲ್ಕುಮಾರ್ ನಿರ್ದೇಶನ ಹಾಗೂ ಧೀರೆನ್ ರಾಮ್ುಮಾರ್ ಮತ್ತು ಮಾನ್ವಿತಾ ಕಾಮತ್ ನಾಯಕ-ನಾಯಕಿ ಆಗಿ ಅಭಿನಯಿಸಿರುವ ಈ ಸಿನಿಮಾದ ಟೀಸರ್ ಬಿಡುಗಡೆಗೆ ಪೂರ್ವಭಾವಿಯಾಗಿ ಪೋಸ್ಟರ್ವೊಂದನ್ನು ರಿಲೀಸ್ ಮಾಡಲಾಗಿದೆ. ಅದರಲ್ಲೂ ಮಾನ್ವಿತಾ ಮತ್ತು ಧೀರೆನ್ ತುಟಿಗಳು ಮುತ್ತಿಗೆ ಹಾಕುವ ದೃಶ್ಯವಿದೆ. ಇನ್ನು ಸ್ವರೂಪ್ ನಿರ್ದೇಶನದಲ್ಲಿ ವಿಹಾನ್-ಸ್ಪಂದನಾ ಅಭಿನಯಿಸಲಿರುವ ‘ಲೆಟ್ಸ್ ಬ್ರೇಕಪ್’, ಪವನ್ ಒಡೆಯರ್ ನಿರ್ದೇಶನದಲ್ಲಿ ಆಶಿಕಾ ರಂಗನಾಥ್-ಇಶಾನ್ ಅಭಿನಯಿಸಿರುವ ‘ರೇಮೊ’, ಸಿಂಪಲ್ ಸುನಿ ನಿರ್ದೇಶನದಲ್ಲಿ ಶರಣ್ -ಆಶಿಕಾ ನಟಿಸಿರುವ ‘ಅವತಾರ ಪುರುಷ’ ಚಿತ್ರತಂಡಗಳೂ ವ್ಯಾಲೆಂಟೈನ್ಸ್ ಡೇ ಹಿನ್ನೆಲೆಯಲ್ಲಿ ಪೋಸ್ಟರ್ಗಳ ಮೂಲಕ ಚಿತ್ರಪ್ರೇಮಿಗಳಿಗೆ ಪ್ರೇಮಿಗಳ ದಿನದ ಶುಭಾಶಯಗಳನ್ನು ಕೋರಿವೆ.