ಸಿಂಧೂ ನದಿ ; ಬಿಲಾವಲ್ ಭುಟ್ಟೋ ಯುದ್ಧ ಬೆದರಿಕೆಗೆ ಮಿಥುನ್ ಚಕ್ರವರ್ತಿ ವ್ಯಂಗ್ಯ | Mithun Chakraborty

Mithun Chakraborty
Published on

Mithun Chakraborty: ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿದ ನಿರ್ಧಾರದ ವಿರುದ್ಧ  ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿಯ ಯುದ್ಧ ಬೆದರಿಕೆಗೆ ಬಿಜೆಪಿ ನಾಯಕ ಮಿಥುನ್ ಚಕ್ರವರ್ತಿ ವ್ಯಂಗ್ಯವಾಡಿದ್ದಾರೆ.

ಇಂತಹ ಹೇಳಿಕೆಗಳು ಮುಂದುವರಿದರೆ ಪಾಕಿಸ್ತಾನದ ಮೇಲೆ ಬ್ರಹ್ಮೋಸ್ ಕ್ಷಿಪಣಿಗಳು ಒಂದರ ಹಿಂದೆ ಒಂದರಂತೆ ಉಡಾಯಿಸಲ್ಪಡುತ್ತವೆ, 140 ಕೋಟಿ ಜನರು ಮೂತ್ರ ವಿಸರ್ಜನೆ ಮಾಡುವಲ್ಲಿ ಆಣೆಕಟ್ಟು ಕಟ್ಟಲು ನಾವು ಯೋಚಿಸಿದ್ದೇವೆ. ಅದರ ನಂತರ ನಾವು ಆಣೆಕಟ್ಟನ್ನು ತೆರೆಯುತ್ತೇವೆ ಪಾಕಿಸ್ತಾನದಲ್ಲಿ ಸುನಾಮಿ ಸಂಭವಿಸುತ್ತದೆ ಚಕ್ರವರ್ತಿ ಹೇಳಿದರು.

ಭುಟ್ಟೋ ಹೇಳಿದ್ದೇನು?

ಸೋಮವಾರ(ಆಗಸ್ಟ್​11) ಸಿಂಧ್ ಸರ್ಕಾರದ ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಭುಟ್ಟೋ, ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡುವ ಮೂಲಕ ಅನಾಗರಿಕತೆಯಲ್ಲಿ ತೊಡಗಿದೆ, ಅಂತಹ ಸಂದರ್ಭ ಎದುರಾದರೆ ಪ್ರತಿಯೊಬ್ಬ ಪಾಕಿಸ್ತಾನಿಯೂ ಯುದ್ಧ ಮಾಡಲು ಸಿದ್ಧ ಎಂದು ಘೋಷಿಸಿದ್ದರು.

ಪಾಕಿಸ್ತಾನ ಯಾವಾಗಲೂ ಶಾಂತಿಯ ಬಗ್ಗೆ ಮಾತನಾಡುತ್ತದೆ, ನಮ್ಮ ಪ್ರತಿನಿಧಿಗಳು ಕೂಡ ಬೇರೆ ಬೇರೆ ದೇಶಗಳಿಗೆ ತೆರಳಿದ್ದಾರೆ. ಅಲ್ಲಿ ನಾವು ಶಾಂತಿಯ ಬಗ್ಗೆ ಮಾತನಾಡಿದರೆ, ಭಾರತ ಯುದ್ಧದ ಬಗ್ಗೆ ಮಾತನಾಡಿದೆ ಎಂದರು.

ಈಗ ಯುದ್ಧ ಪ್ರಾರಂಭವಾಗಿದೆ. ನಾವು ಹಿಂದೆ ಸರಿಯುವುದಿಲ್ಲ, ತಲೆಬಾಗುವುದಿಲ್ಲ ಎಂದು ಈ ನೆಲದಿಂದಲೇ ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದು, ಭಾರತ ಸಿಂಧೂ ನದಿಯ ಮೂಲಕ ದಾಳಿ ನಡೆಸಲು ಯೋಚಿಸಿದರೆ, ಪಾಕಿಸ್ತಾನದ ಪ್ರತಿಯೊಂದು ಪ್ರಾಂತ್ಯದ ಜನರು ನಿಮ್ಮನ್ನು ಎದುರಿಸಲು ಸಿದ್ಧರಿದ್ದಾರೆ, ಭಾರತ ಈ ಯುದ್ಧದಲ್ಲಿ ಖಂಡಿತ ಸೋಲಲಿದೆ, ಪಾಕಿಸ್ತಾನದ ಜನರು ಆರು ನದಿಗಳನ್ನು ಮರಳಿ ಪಡೆಯುವಷ್ಟು ಮಟ್ಟಿಗೆ ಬಲಿಷ್ಠರಾಗಿದ್ದಾರೆ ಎಂದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net