ಜಮ್ಮು- ಕಾಶ್ಮೀರ; ವಾಹನದೊಳಗೆ ಸ್ಫೋಟ, 8 ಜನರ ಸ್ಥಿತಿ ಗಂಭೀರ!

Untitled design - 2023-09-27T134509.934
Published on

ಅನಂತನಾಗ್‌: ಬುಧವಾರ (ಸೆ.27) ಲಾರ್ಕಿಪೋರಾದಲ್ಲಿ ವಾಹನದೊಳಗೆ ಸ್ಫೋಟ ಉಂಟಾದ ಪರಿಣಾಮ ಎಂಟು ಜನರು ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯಲ್ಲಿ ವರಿದಯಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ಅನಂತನಾಗ್‌ನ ಲಾರ್ಕಿಪೋರಾದಲ್ಲಿ ವಾಹನದೊಳಗೆ ನಡೆದ ಸ್ಫೋಟದಲ್ಲಿ ನಾಲ್ಕು ಜನರಿಗೆ ಸುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ಯಾವುದೇ ಭಯೋತ್ಪಾದನೆಯ ಕೋನವಿಲ್ಲ. ಟಾಟಾ ಪಿಕಪ್ ಟ್ರಕ್‌ನೊಳಗಿನ ವೈಬ್ರೇಟರ್ ಸ್ಫೋಟಗೊಂಡ ಕಾರಣ ವಾಹನದೊಳಗಿದ್ದ ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಹತ್ತಿರದ ಜಿಎಂಸಿ ಜಂಗ್ಲಮಂಡಿ ಅನಂತನಾಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನೆಯಲ್ಲಿ ಗಾಯಗೊಂಡವರನ್ನು ಚಟೋ ಕುಮಾರ್ (18), ಪರಮ್ ಜೀತ್ (22), ಭವನ್ ಕುಮಾರ್ (21), ಫಿಕಾನ್ (17), ಜಿತೇನ್ (21), ಟಿಟು ಕುಮಾರ್ (23), ಮತ್ಲೇಶ್ ಕುಮಾರ್ (19) ಮತ್ತು ಶಾನ್ ಕುಮಾರ್ (19) ಎಂದು ಗುರುತಿಸಲಾಗಿದೆ. ಗಾಯಗಳುಗಳೆಲ್ಲಾ ಬಿಹಾರದ ನಿವಾಸಿಗಳು ಎಂದು ಹೇಳಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net