11ರಂದು ಸಹಕಾರ ಮಹಾಮಂಡಳದಿಂದ ಶೈಕ್ಷಣಿಕ ಕಾರ್ಯಾಗಾರ

V. Raju
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷ ವಿ.ರಾಜು.
Published on

ಶಿವಮೊಗ್ಗ: ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದಿಂದ ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರಿಗೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ, ಸಿಬ್ಬಂದಿಗೆ ಶೈಕ್ಷಣಿಕ ಕಾರ್ಯಾಗಾರವನ್ನು ಮಾ.11ರಂದು ಬೆಳಗ್ಗೆ 9ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ಮಹಾಮಂಡಳದ ಅಧ್ಯಕ್ಷ ವಿ.ರಾಜು ತಿಳಿಸಿದರು.

ಸಹಕಾರ ಸಂಘಗಳ ಸಿಬ್ಬಂದಿಗೆ ಹಾಗೂ ನಿರ್ದೇಶಕರಿಗೆ ಶೈಕ್ಷಣಿಕ ಕಾರ್ಯಾಗಾರದ ಅವಶ್ಯಕತೆ ಇದೆ. ಇದರಿಂದ ಬ್ಯಾಂಕಿಂಗ್ ವ್ಯವಹಾರ ಠೇವಣಿ, ಉಳಿತಾಯ ಖಾತೆ ನಿರ್ವಹಿಸುವುದು ಸೇರಿ ಹಲವು ವಿಷಯಗಳು ತಿಳಿಯುತ್ತವೆ. ಇದನ್ನು ಯೋಚಿಸಿ ಮಾರ್ಗದರ್ಶನಗಳ ರೂಪದಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಕಾರ್ಯಾಗಾರ ಉದ್ಘಾಟಿಸುವರು. ಸಹಕಾರ ಸಂಘಗಳ ಉಪ ನಿಬಂಧಕ ಜಿ.ವಾಸುದೇವ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ರತ್ನಾಕರ್ ಹಾಗೂ ಸಹಕಾರಿಗಳಾದ ಕೆ.ಕೆ.ಮಹೇಂದ್ರ ಪ್ರಸಾದ್ ಗೌಡ, ಡಾ. ಬಿ.ಡಿ.ಭೂಕಾಂತ, ಜಿ. ಮಲ್ಲಿಕಾರ್ಜುನಯ್ಯ, ಡಿ.ಆರ್.ನಾಗೇಶಪ್ಪ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಎಸ್.ಪಿ.ದಿನೇಶ್, ಕೆ.ಎನ್. ರಾಮಕೃಷ್ಣ ಇತರರು ಭಾಗವಹಿಸುವರು. ಕಾರ್ಯಾಗಾರದಲ್ಲಿ ಆರ್.ವಿ.ಸುಮಾ, ಎಚ್.ಎಸ್.ನಾಗರಾಜು, ಬಿ.ವಿ.ರವೀಂದ್ರನಾಥ್ ವಿಶೇಷ ಉಪನ್ಯಾಸ ನೀಡುವರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net