

ಶಿವಮೊಗ್ಗ: ಶಿವಮೊಗ್ಗ ನಲಿ-ಕಲಿ ತಾರೆಯರ ತಂಡವು ಸರ್ಕಾರಿ ಶಾಲೆಗಳ ಭೌತಿಕ ಸೌಲಭ್ಯ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ 20 ಶಾಲೆಗಳಿಗೆ 5 ಲಕ್ಷ ರೂ. ವೆಚ್ಚದ ನಲಿ-ಕಲಿ ಟೇಬಲ್ಸ್, ಮ್ಯಾಟ್‌ಗಳು ಹಾಗೂ 100ಕ್ಕೂ ಹೆಚ್ಚು ಶಾಲೆಗಳಿಗೆ 13,750 ನೋಟ್‌ಬುಕ್‌ಗಳನ್ನು ವಿತರಿಸಿತು.
ಶಿವಮೊಗ್ಗ ಡಯಟ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಭದ್ರಾವತಿ ತಾಲೂಕಿನ ಅರಹತೊಳಲು ಕ್ಲಸ್ಟರ್ಸ್‌ನ 10 ಶಾಲೆಗಳಿಗೆ ಬೆಂಗಳೂರಿನ ಆರ್.ಕೆ.ಫೌಂಡೇಶನ್ ಮತ್ತು ಅಲ್ಲೀಜಿನ್ ಸಂಸ್ಥೆ ಸಹಯೋಗದಲ್ಲಿ 2,520 ನೋಟ್‌ಬುಕ್ಸ್ ಹಾಗೂ ಭಗವತಿಕೆರೆ ಶಾಲೆಗೆ ನಲಿ-ಕಲಿ ಟೇಬಲ್ಸ್, ಮ್ಯಾಟ್‌ಗಳನ್ನು ವಿತರಿಸಲಾಯಿತು. ಶಿವಮೊಗ್ಗ ಡಯಟ್ ಹಿರಿಯ ಉಪನ್ಯಾಸಕಿ ಎಸ್.ರೇಣುಕಾ, ಹಿರಿಯ ಉಪನ್ಯಾಸಕರಾದ ಹರಿಪ್ರಸಾದ್, ಎನ್.ನಾರಾಯಣ್, ಆರ್.ಕೆ.ಫೌಂಡೇಶನ್‌ನ ಕೋ ಆರ್ಡಿನೇಟರ್, ಭದ್ರಾವತಿ ಬಿಇಒ ಎ.ಕೆ.ನಾಗೇಂದ್ರಪ್ಪ, ನಲಿ-ಕಲಿ ಕ್ರಿಯಾಶೀಲ ತಾರೆಯರ ತಂಡದ ಅಧ್ಯಕ್ಷೆ ಫೌಜಿಯಾ ಸರ್ವತ್, ಭದ್ರಾವತಿ ತಾಲೂಕಿನ ಅರಹತೊಳಲು ಸಿಆರ್‌ಪಿ ಪಿ.ಎಂ.ವಾಣಿ ಉಪಸ್ಥಿತರಿದ್ದರು.