VIDEO: ಫಲಿತಾಂಶ ಪ್ರಕಟಣೆ, ಶಾಲಾರಂಭದ ಬಗ್ಗೆ ನಿರ್ಣಯವಾಗಿಲ್ಲ

Suresh kumar in chikkaballapura
Published on

ಬೆಂಗಳೂರು: ಜುಲೈನಲ್ಲಿ ಪರೀಕ್ಷಾ ಫಲಿತಾಂಶ, ಶಾಲಾರಂಭದ ಬಗ್ಗೆ‌ ಸರ್ಕಾರ‌ ನಿರ್ಣಯಿಸಿಲ್ಲ, ಈ ಬಾರಿ ಯಾವುದೇ ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡಬಾರದು ಎಂದು ಶಿಕ್ಷಣ ಸಚಿವ ಎಸ್​. ಸುರೇಶ್ ಕುಮಾರ್​ ಸೋಮವಾರ ಬೆಳಗ್ಗೆ ಹೇಳಿದ್ದಾರೆ.

ವರು ಚಿಕ್ಕಬಳ್ಳಾಪುರ ಪ್ರವಾಸದಲ್ಲಿದ್ದು ಸುದ್ದಿಗಾರರ ಜತೆಗೆ ಮಾತನಾಡುತ್ತ ಈ ವಿಷಯ ತಿಳಿಸಿದರು. ಆನ್ ಲೈನ್ ಶಿಕ್ಷಣ ಕುರಿತಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ತಾತ್ಕಾಲಿಕ ಆದೇಶ ಹೊರಡಿಸಲಾಗಿದ್ದು, ರಾಜ್ಯ ಸರ್ಕಾರ ರಚಿಸಿರುವ ತಜ್ಞರ ಸಮಿತಿ ವರದಿಯ ಬಳಿಕ ಎಲ್ಲ ವಯೋಮಾನದ ವಿದ್ಯಾರ್ಥಿಗಳ ಅವಶ್ಯಕತೆಗನುಗುಣವಾಗಿ ನಿರ್ದಿಷ್ಟ ರೂಪುರೇಷೆ‌ ಪ್ರಕಟಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net