

ರಾಣೆಬೆನ್ನೂರ: ನಮ್ಮ ದೇಶದಲ್ಲಿ ಇಂದು ಕಂಡುಬರುವ ಮತಾಂಧತೆ, ಜ್ಯಾತ್ಯಾಂಧತೆ ಮತ್ತು ಗಾಢವಾದ ಮೌಢ್ಯತೆಗಳಿಗೆ ಮುಖ್ಯ ಕಾರಣ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವದ ಕೊರತೆಯಾಗಿದೆ ಎಂದು ಪ್ರೊ. ಎಚ್.ಎ. ಭಿಕ್ಷಾವತಿರ್ಮಠ ಹೇಳಿದರು.
ನಗರದ ಬಿ.ಎ.ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ವೈಜ್ಞಾನಿಕ ಮನೋವೃತ್ತಿ ದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೈಚಾರಿಕ ಮನೋಭಾವದ ಕೊರತೆಯಿಂದಾಗಿ ಧರ್ಮದ ಮತ್ತು ದೇವರ ಹೆಸರಿನಲ್ಲಿ ಜಗತ್ತಿನಲ್ಲಿ ಅನೇಕ ಯುದ್ಧಗಳಾಗಿವೆ. ರಕ್ತಪಾತವಾಗಿರುವುದು ಇತಿಹಾಸದಲ್ಲಿ ಕಂಡುಬರುತ್ತದೆ. ಇಂದಿನ ವೈಜ್ಞಾನಿಕ ಮತ್ತು ಯುಗದಲ್ಲಿಯೂ ಮೌಢ್ಯತೆ ಬೆಳೆಯುತ್ತಿರುವುದು ವಿಷಾಧನೀಯ.
ಪಟ್ಟಬದ್ಧ ಹಿತಾಸಕ್ತಿಗಳು ಈ ಮೌಢ್ಯತೆಯನ್ನು ಎಲ್ಲ ಜಾತಿ ಮತದ ಜನರಲ್ಲಿ ಬಿತ್ತಿ ಬೆಳೆಯುತ್ತಿದ್ದಾರೆ. ಮೌಢ್ಯತೆ ಎಂಬುದು ರ್ದುಬಲ ಮನಸ್ಸಿನ ಸಂಕೇತ. ಆದ್ದರಿಂದ ಇಂದಿನ ಯುವಕ ಯುವತಿಯರು ಏನು, ಹೇಗೆ, ಏಕೆ ಎಂಬ ಪ್ರಶ್ನೆಗಳನ್ನು ಕೇಳುವ ಮೂಲಕ ಎಲ್ಲರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ. ಎಂ.ಎಂ. ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು.
ಎನ್ಎಸ್ಎಸ್ ಕಾರ್ಯಕ್ರಾಮಾಧಿಕಾರಿ ಪರಶುರಾಮ ಪವಾರ, ಡಾ. ರಾಜೀವ್ ಕೆ.ಎಂ., ಶ್ರೀಕಾಂತ ಗೌಡಶಿವಣ್ಣನವರ, ಡಾ. ಎಚ್.ನರಸಿಂಹಯ್ಯ, ಎ. ಶಂಕರನಾಯ್ಕ, ಉಮಾ ಕಂಬಳಿ, ಲಕ್ಷಿ$್ಮ ಹಣಚಿಕ್ಕಿ, ವೀಣಾ ಲಮಾಣಿ, ಪವನ ಲಮಾಣಿ, ಅನಿತಾ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.