

ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿ, ಭಾರತದ ನೆರವಿನಿಂದ ಪ್ರತ್ಯೇಕ ರಾಷ್ಟ್ರವಾಗಿ ಅಸ್ತಿತ್ವಕ್ಕೆ ಬಂದ ಬಾಂಗ್ಲಾದೇಶ ಇಂದು ಅದೇ ಪಾಕಿಸ್ತಾನದೊಂದಿಗೆ ಸ್ನೇಹಹಸ್ತ ಚಾಚಿರುವುದು ವರ್ತಮಾನದ ದುರಂತ. ಭೂತಕಾಲವನ್ನು ಮರೆತಿರುವ, ಇತಿಹಾಸಕ್ಕೆ ಬೆನ್ನು ತಿರುಗಿಸಿರುವ, ವರ್ತಮಾನವನ್ನು ರ್ನಿಲಸುತ್ತಿರುವ ಅರ್ಥಶಾಸ್ತ್ರಜ್ಞ ಮಹಮದ್ ಯೂನುಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಒಂದಾದ ಮೇಲೊಂದರಂತೆ ತಪ್ಪು , ಅಷ್ಟೇ ಅಲ್ಲ, ಮಾರಕವಾದ ಹೆಜ್ಜೆಗಳನ್ನು ಇರಿಸುತ್ತಿರುವುದು, ಆ ದೇಶದ ಭವಿಷ್ಯವನ್ನು ಕರಾಳವಾಗಿಸುವ ಧಾಷ್ಟ್ಯವಾಗಿದೆ.
ತನ್ನ ಜೀವವನ್ನೇ ಪಣವಾಗಿಟ್ಟು ದೇಶದ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನದ ಪಾಶವಿ ಶಕ್ತಿಯೊಂದಿಗೆ ಹೋರಾಡಿದ, ಅದಕ್ಕಾಗಿ "ವಂಗಬಂಧು' ಎಂಬ ಬಿರುದಿನೊಂದಿಗೆ ರಾಷ್ಟ್ರಪಿತನ ಸ್ಥಾವವನ್ನು ಪಡೆದ ಶೇಖ್ ಮುಜೀಬುರ್ ರಹಮಾನ್ರನ್ನು ಅವಮಾನಿಸುವ, ಅವರ ನೆನಪನ್ನು ಅಳಿಸುವ ಕೃತ್ಯಗಳು 2024ರ ಆಗಸ್ಟ್ 5ರಿಂದಲೇ ಆರಂಭವಾದವು. ಮಹಮದ್ ಯೂನುಸ್ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗುತ್ತಿದ್ದಂತೆ, ಪಾಕಿಸ್ತಾನದ ಜತೆ ಸ್ನೇಹ ಬೆಳೆಸಲು ಮುಂದಾಗಿದ್ದು, ಈಗ ಮತ್ತೊಂದು ಹೆಜ್ಜೆ ಮುಂದೆ ಇರಿಸಿದ್ದಾರೆ.
ಪಾಕಿಸ್ತಾನದ ಬೇಹುಗಾರಿಕಾ ಸಂಟನೆ ಐಎಸ್ಐನ ಡೈರೆಕ್ಟರ್ ಜನರಲ್ ಆ್ ಅನಾಲಿಸಿಸ್ ಮೇಜರ್ ಜನರಲ್ ಶಾಹೀದ್ ಅಮೀರ್ ಅ್ಸರ್ ಮತ್ತು ಇತರ ಕೆಲವು ಅಧಿಕಾರಿಗಳು ಬಾಂಗ್ಲಾದೇಶಕ್ಕೆ ಭೇಟಿ ನೀಡಿ, ಅಲ್ಲಿನ ಸರ್ಕಾರದ ಮುಖ್ಯಸ್ಥರೊಂದಿಗೆ ಹಾಗೂ ಸೇನಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಭೇಟಿಯ ಬೆನ್ನಲ್ಲೇ ಪಾಕಿಸ್ತಾನದ ಸೇನಾಧಿಕಾರಿಗಳು ಕೂಡ ಢಾಕಾಗೆ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ನಡುವೆ ನೇರ ವಿಮಾನಯಾನ ಆರಂಭಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಉಭಯ ದೇಶಗಳ ನಡುವೆ ಸೇನೆ ಸಹಕಾರ ಹೆಚ್ಚಿಸುವ ಬಗ್ಗೆ ಮಾತುಕತೆ ನಡೆದಿದೆ.
ಈ ಎಲ್ಲ ಬೆಳವಣಿಗೆಗಳು ಭಾರತದ ಮಟ್ಟಿಗೆ ಕಳವಳಕಾರಿಯೇ. ಹಾಗಾಗಿ, "ಈ ಬೆಳವಣಿಗೆಗಳನ್ನು ಹಾಗೂ ರಾಷ್ಟ್ರೀಯ ಭದ್ರತೆಯ ಮೇಲೆ ಪರಿಣಾಮ ಬೀರುವ ಕ್ರಮಗಳನ್ನು ಸೂಕ್ಷ್ಮಾವಾಗಿ ಗಮನಿಸಲಾಗುತ್ತಿದೆ' ಎಂದು ಕೇಂದ್ರ ಸರ್ಕಾರ ಹೇಳಿರುವುದು ಹೌದಾದರೂ, ಇಂದಿನ ಸ್ಥಿತಿಗೆ ಇಷ್ಟೇ ಕ್ರಮ ಸಾಕಾಗದು. ಬಾಂಗ್ಲಾದೇಶದ ಅಸಹಜ ಬೆಳವಣಿಗೆಗಳನ್ನು ಮತ್ತು ಅಲ್ಲಿನ ಸರ್ಕಾರದ ಮಾರಕ ನಿರ್ಧಾರಗಳನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪಿಸಿ, ಪ್ರತಿಭಟನೆ ವ್ಯಕ್ತಪಡಿಸಬೇಕಿದೆ.
ಇಲ್ಲವಾದಲ್ಲಿ, ಪಾಕಿಸ್ತಾನದ ಜತೆ ಬಾಂಗ್ಲಾದೇಶ ಕೂಡ ಮತ್ತೊಂದು ದೊಡ್ಡ ತಲೆನೋವಾಗಿ ಭಾರತಕ್ಕೆ ಕಾಡಲಿದೆ. ಬಾಂಗ್ಲಾದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂನೆ ನಡೆಯುತ್ತಿದ್ದು. ಅಲ್ಲಿನ ಅಲ್ಪಸಂಖ್ಯಾತರಾದ ಹಿಂದುಗಳು ಮತ್ತು ಕೆಸ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ನೆರೆಯಲ್ಲೇ ಮತ್ತೊಂದು ಪ್ರಬಲ ಶತ್ರುರಾಷ್ಟ್ರ ಉದ್ಭವವಾಗುವುದನ್ನು ಭಾರತ ತಡೆಯಬೇಕಿದೆ ಮತ್ತು ಜಾಗತಿಕ ಮಟ್ಟದ ಪ್ರಮುಖ ಶಕ್ತಿಗಳ ನೆರವು ಪಡೆದು ಅಲ್ಲಿನ ಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಬೇಕಿದೆ. ಬಾಂಗ್ಲಾದೇಶವನ್ನೂ ಮೂಲಭೂತವಾದಿ ರಾಷ್ಟ್ರವಾಗಿಸಲು ಪಾಕಿಸ್ತಾನ ಹವಣಿಸುತ್ತಿದ್ದು, ಸೇನಾ ಸಹಕಾರದ ನೆಪದಲ್ಲಿ ತನ್ನ ರಹಸ್ಯ ಕಾರ್ಯಸೂಚಿಯನ್ನು ಜಾರಿಗೊಳಿಸುತ್ತಿದೆ. ಭಾರತ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ.