ಸಂಪಾದಕೀಯ: ಮಕ್ಕಳ ಹಿತರಕ್ಷಣೆ ಮುಖ್ಯ

children
Published on

ಕರೊನಾ ಸೋಂಕಿನ ಹಾವಳಿಯಿಂದ ಎಲ್ಲ ಕ್ಷೇತ್ರಗಳಿಗೂ ಹಾನಿಯಾಗಿದೆ ಎಂಬುದು ದಿಟವೇ. ಆದರೆ ಹೆಚ್ಚು ಅಸ್ತವ್ಯಸ್ತಗೊಂಡಿದ್ದು ಶೈಕ್ಷಣಿಕ ವರ್ಷ. ಇದರಿಂದ ಮಕ್ಕಳು ಅನುಭವಿಸುತ್ತಿರುವ ತೊಂದರೆಗಳು ಹಲವು. ಈ ಮಧ್ಯೆ ಕರೊನಾದ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸಲಿದೆ ಎಂಬ ವರದಿಯೂ ಕೊಂಚ ಕಳವಳ ಮೂಡಿಸಿತ್ತು.

ಆದರೆ, ತಜ್ಞರ ಅಧ್ಯಯನ ವರದಿಗಳು ವಾಸ್ತವ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದ್ದು, ಮುಂಬರುವ ದಿನಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಅರಿವು ಮೂಡಿಸಿವೆ. ಮೂರನೇ ಅಲೆಯ ಹಿನ್ನೆಲೆಯಲ್ಲಿ ಮಕ್ಕಳಿಗೆ ಸೋಂಕು ಕಾಣಿಸಿಕೊಂಡರೂ ಅದು ಗಂಭೀರ ಸ್ವರೂಪದ್ದಾಗಿ ಇರುವುದಿಲ್ಲ. ಆದರೆ ಸೋಂಕು ಕಾಣಿಸಿಕೊಂಡ ಒಂದು ತಿಂಗಳ ನಂತರ ಮಿಸ್ಸಿ ಕಾಯಿಲೆ ಬರುವ ಸಾಧ್ಯತೆಯಿದೆ. ಇದಕ್ಕೆ ಅಗತ್ಯವಾದ ಔಷಧದ ಕೊರತೆಯಿದ್ದು, ಈ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಬಿಬಿಎಂಪಿ ತಜ್ಞರ ವರದಿ ಶಿಫಾರಸ್ಸು ಮಾಡಿದೆ. ಹಾಗಾಗಿ, ಯಾವೆಲ್ಲ ಸಿದ್ಧತೆಗಳು ಮಾಡಿಕೊಳ್ಳಬೇಕಿದೆಯೋ ಆ ನಿಟ್ಟಿನಲ್ಲಿ ಸೂಕ್ತ ಕಾಳಜಿ ವಹಿಸಿ, ಸುರಕ್ಷಾ ಕ್ರಮಗಳನ್ನು ಮತ್ತು ಔಷಧದ ಲಭ್ಯತೆಯನ್ನು ಖಾತ್ರಿಪಡಿಸಬೇಕಿದೆ. ಸಮಸ್ಯೆ ತೀವ್ರ ಸ್ವರೂಪಕ್ಕೆ ತಲುಪಿದಾಗ ಪರಿಹಾರಕ್ಕೆ ತಡಕಾಡುವ ಬದಲು ಅಗತ್ಯ ಸಿದ್ಧತೆ ಮಾಡಿಕೊಂಡರೆ ಕ್ಲಿಷ್ಟಕರ ಸನ್ನಿವೇಶವನ್ನೂ ಸಮರ್ಥವಾಗಿ ನಿಭಾಯಿಸಬಹುದು.

ಮತ್ತೊಂದು ಬೆಳವಣಿಗೆ ಶಾಲಾ ಆರಂಭದ ಬಗ್ಗೆ. ಅನಿವಾರ್ಯವಾಗಿ ಆನ್​ಲೈನ್ ತರಗತಿಗಳಿಗೆ ಹೊಂದಿಕೊಳ್ಳುವ ಪರಿಸ್ಥಿತಿ ಇದೆಯಾದರೂ, ಆರ್ಥಿಕ, ಸಾಮಾಜಿಕ ಕಾರಣಗಳಿಂದ ಅನೇಕ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂಬುದು ಸ್ಪಷ್ಟ. ಭೌತಿಕ ತರಗತಿಯಂತೆ ಇವು ಪರಿಣಾಮಕಾರಿಯೂ ಅಲ್ಲ. ಈಗಾಗಲೇ ಪದವಿ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಆದರೆ, ಪ್ರಶ್ನೆ ಇರುವುದು ಪ್ರಾಥಮಿಕ ಶಾಲೆಗಳ ಆರಂಭದ ಬಗ್ಗೆ. ಚಿಕ್ಕಮಕ್ಕಳಿಗೆ ಶಾಲೆಗೆ ಕಳುಹಿಸಲು ಪಾಲಕರಿಗೆ ಹಿಂಜರಿಕೆ ಇದೆಯಾದರೂ, ಕಲಿಕೆಯಿಂದ ವಂಚಿತರಾಗುವ ಭೀತಿಯೂ ಕಾಡುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ತಜ್ಞರ ವರದಿ ಇತ್ತೀಚೆಗೆ ಸಲ್ಲಿಕೆಯಾಗಿದ್ದು, ಸೋಂಕು ಪ್ರಮಾಣ ದರ ಶೇಕಡ 5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ, ಪರಿಸ್ಥಿತಿ ಅವಲೋಕಿಸಿ ಪ್ರಾಥಮಿಕ ಶಾಲೆ ಆರಂಭಿಸಬಹುದೆಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ನೇಮಿಸಿರುವ ತಜ್ಞರ ಸಮಿತಿ ಎಲ್ಲ ಅಂಶಗಳನ್ನು ಪರಿಗಣಿಸಿ ತಿಂಗಳಾಂತ್ಯಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ. ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗಿರುವುದರಿಂದ, ಸುರಕ್ಷಾ ಕ್ರಮಗಳನ್ನು ಅಳವಡಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸುವ ಬಗ್ಗೆ ಅಗತ್ಯ ಹೆಜ್ಜೆ ಇರಿಸಬೇಕು.

ಕಳೆದ ಹದಿನಾರು ತಿಂಗಳಿಂದ ಮಕ್ಕಳು ಮನೆಯಲ್ಲೇ ಇರುವುದರಿಂದ ಕಲಿಕೆಯಲ್ಲಿನ ಆಸಕ್ತಿ, ಏಕಾಗ್ರತೆ ಕಡಿಮೆಯಾಗುತ್ತಿದೆ. ಮಕ್ಕಳ ವಿಷಯದಲ್ಲಿ ನಿರ್ಧಾರ ತಳೆಯುವುದು ಸೂಕ್ಷ್ಮ ವಿಚಾರವಾದರೂ, ತಜ್ಞರ ಅಭಿಪ್ರಾಯ, ವರದಿಯನ್ನು ಪರಿಗಣಿಸಿ ಮುಂದಡಿ ಇಡಲು ಇದು ಸಕಾಲ. ಒಟ್ಟಾರೆ, ಔಷಧ ಲಭ್ಯತೆ ಅಥವಾ ಶಾಲೆಗಳ ಆರಂಭದ ವಿಷಯದಲ್ಲಿ ಮಕ್ಕಳ ಹಿತವನ್ನೇ ಆದ್ಯತೆ ಆಗಿಸಿಕೊಂಡು ಸೂಕ್ತ ನಿರ್ಣಯಕ್ಕೆ ಬರುವುದು ಅಗತ್ಯ.

ಕರೊನಾ ಸೋಂಕಿನ ಹಾವಳಿಯಿಂದ ಎಲ್ಲ ಕ್ಷೇತ್ರಗಳಿಗೂ ಹಾನಿಯಾಗಿದೆ ಎಂಬುದು ದಿಟವೇ. ಆದರೆ ಹೆಚ್ಚು ಅಸ್ತವ್ಯಸ್ತಗೊಂಡಿದ್ದು ಶೈಕ್ಷಣಿಕ ವರ್ಷ. ಇದರಿಂದ ಮಕ್ಕಳು ಅನುಭವಿಸುತ್ತಿರುವ ತೊಂದರೆಗಳು ಹಲವು. ಈ ಮಧ್ಯೆ ಕರೊನಾದ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಬಾಧಿಸಲಿದೆ ಎಂಬ ವರದಿಯೂ ಕೊಂಚ ಕಳವಳ ಮೂಡಿಸಿತ್ತು. ಆದರೆ, ತಜ್ಞರ ಅಧ್ಯಯನ ವರದಿಗಳು ವಾಸ್ತವ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದ್ದು, ಮುಂಬರುವ ದಿನಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆಯೂ ಅರಿವು ಮೂಡಿಸಿವೆ. ಮೂರನೇ ಅಲೆಯ ಹಿನ್ನೆಲೆಯಲ್ಲಿ ಮಕ್ಕಳಿಗೆ ಸೋಂಕು ಕಾಣಿಸಿಕೊಂಡರೂ ಅದು ಗಂಭೀರ ಸ್ವರೂಪದ್ದಾಗಿ ಇರುವುದಿಲ್ಲ. ಆದರೆ ಸೋಂಕು ಕಾಣಿಸಿಕೊಂಡ ಒಂದು ತಿಂಗಳ ನಂತರ ಮಿಸ್ಸಿ ಕಾಯಿಲೆ ಬರುವ ಸಾಧ್ಯತೆಯಿದೆ. ಇದಕ್ಕೆ ಅಗತ್ಯವಾದ ಔಷಧದ ಕೊರತೆಯಿದ್ದು, ಈ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಬಿಬಿಎಂಪಿ ತಜ್ಞರ ವರದಿ ಶಿಫಾರಸ್ಸು ಮಾಡಿದೆ. ಹಾಗಾಗಿ, ಯಾವೆಲ್ಲ ಸಿದ್ಧತೆಗಳು ಮಾಡಿಕೊಳ್ಳಬೇಕಿದೆಯೋ ಆ ನಿಟ್ಟಿನಲ್ಲಿ ಸೂಕ್ತ ಕಾಳಜಿ ವಹಿಸಿ, ಸುರಕ್ಷಾ ಕ್ರಮಗಳನ್ನು ಮತ್ತು ಔಷಧದ ಲಭ್ಯತೆಯನ್ನು ಖಾತ್ರಿಪಡಿಸಬೇಕಿದೆ. ಸಮಸ್ಯೆ ತೀವ್ರ ಸ್ವರೂಪಕ್ಕೆ ತಲುಪಿದಾಗ ಪರಿಹಾರಕ್ಕೆ ತಡಕಾಡುವ ಬದಲು ಅಗತ್ಯ ಸಿದ್ಧತೆ ಮಾಡಿಕೊಂಡರೆ ಕ್ಲಿಷ್ಟಕರ ಸನ್ನಿವೇಶವನ್ನೂ ಸಮರ್ಥವಾಗಿ ನಿಭಾಯಿಸಬಹುದು.

ಮತ್ತೊಂದು ಬೆಳವಣಿಗೆ ಶಾಲಾ ಆರಂಭದ ಬಗ್ಗೆ. ಅನಿವಾರ್ಯವಾಗಿ ಆನ್​ಲೈನ್ ತರಗತಿಗಳಿಗೆ ಹೊಂದಿಕೊಳ್ಳುವ ಪರಿಸ್ಥಿತಿ ಇದೆಯಾದರೂ, ಆರ್ಥಿಕ, ಸಾಮಾಜಿಕ ಕಾರಣಗಳಿಂದ ಅನೇಕ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂಬುದು ಸ್ಪಷ್ಟ. ಭೌತಿಕ ತರಗತಿಯಂತೆ ಇವು ಪರಿಣಾಮಕಾರಿಯೂ ಅಲ್ಲ. ಈಗಾಗಲೇ ಪದವಿ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಆದರೆ, ಪ್ರಶ್ನೆ ಇರುವುದು ಪ್ರಾಥಮಿಕ ಶಾಲೆಗಳ ಆರಂಭದ ಬಗ್ಗೆ. ಚಿಕ್ಕಮಕ್ಕಳಿಗೆ ಶಾಲೆಗೆ ಕಳುಹಿಸಲು ಪಾಲಕರಿಗೆ ಹಿಂಜರಿಕೆ ಇದೆಯಾದರೂ, ಕಲಿಕೆಯಿಂದ ವಂಚಿತರಾಗುವ ಭೀತಿಯೂ ಕಾಡುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ತಜ್ಞರ ವರದಿ ಇತ್ತೀಚೆಗೆ ಸಲ್ಲಿಕೆಯಾಗಿದ್ದು, ಸೋಂಕು ಪ್ರಮಾಣ ದರ ಶೇಕಡ 5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ, ಪರಿಸ್ಥಿತಿ ಅವಲೋಕಿಸಿ ಪ್ರಾಥಮಿಕ ಶಾಲೆ ಆರಂಭಿಸಬಹುದೆಂದು ಉಲ್ಲೇಖಿಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ನೇಮಿಸಿರುವ ತಜ್ಞರ ಸಮಿತಿ ಎಲ್ಲ ಅಂಶಗಳನ್ನು ಪರಿಗಣಿಸಿ ತಿಂಗಳಾಂತ್ಯಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ. ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗಿರುವುದರಿಂದ, ಸುರಕ್ಷಾ ಕ್ರಮಗಳನ್ನು ಅಳವಡಿಸಿ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸುವ ಬಗ್ಗೆ ಅಗತ್ಯ ಹೆಜ್ಜೆ ಇರಿಸಬೇಕು.

ಕಳೆದ ಹದಿನಾರು ತಿಂಗಳಿಂದ ಮಕ್ಕಳು ಮನೆಯಲ್ಲೇ ಇರುವುದರಿಂದ ಕಲಿಕೆಯಲ್ಲಿನ ಆಸಕ್ತಿ, ಏಕಾಗ್ರತೆ ಕಡಿಮೆಯಾಗುತ್ತಿದೆ. ಮಕ್ಕಳ ವಿಷಯದಲ್ಲಿ ನಿರ್ಧಾರ ತಳೆಯುವುದು ಸೂಕ್ಷ್ಮ ವಿಚಾರವಾದರೂ, ತಜ್ಞರ ಅಭಿಪ್ರಾಯ, ವರದಿಯನ್ನು ಪರಿಗಣಿಸಿ ಮುಂದಡಿ ಇಡಲು ಇದು ಸಕಾಲ. ಒಟ್ಟಾರೆ, ಔಷಧ ಲಭ್ಯತೆ ಅಥವಾ ಶಾಲೆಗಳ ಆರಂಭದ ವಿಷಯದಲ್ಲಿ ಮಕ್ಕಳ ಹಿತವನ್ನೇ ಆದ್ಯತೆ ಆಗಿಸಿಕೊಂಡು ಸೂಕ್ತ ನಿರ್ಣಯಕ್ಕೆ ಬರುವುದು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net